ಕೊಡಗಿನ ಸಾಂಪ್ರದಾಯಿಕ ಅಡುಗೆ ಪಾಪುಟ್ಟ್ ಮಾಡುವ ವಿಧಾನ

25/01/2021

ಪಾಪುಟ್ಟ್ :

ಕೊಡಗಿನ ಸಾಂಪ್ರದಾಯಿಕ ಅಡಿಗೆಯಲ್ಲಿ ಇದು ಒಂದು.

ಬೇಕಾಗುವ ಸಾಮಾಗ್ರಿಗಳು : 1 ಕೆಜಿ ಅಕ್ಕಿತರಿ ಸಲ್ಪ (ದೊಡ್ಡ ತರಿ), ಉಪ್ಪು, ತೆಂಗಿನ ತುರಿ, ನೀರು, ಬಿದುರಿನ ಕಡ್ಡಿ 6

ಮಾಡುವ ವಿಧಾನ :
ಮೊದಲಿಗೆ ಒಂದು ಕೆಜಿ ತರಿಯನ್ನ ಒಮ್ಮೆ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು, ಆನಂತರ ಪುನ ಅಕ್ಕಿತರಿ ಮುಳುಗುವಷ್ಟು ನೀರು ಹಾಕಿ,ರುಚಿಗೆ ಉಪ್ಪು. ಇದನ್ನು 1/4 ರಿಂದ 1/2 (1/4 ಣo 1/2 )ಗಂಟೆಗಳ ಕಾಲ ನೆನೆಯಲು ಬಿಡಬೇಕು. ಈಗ ಒಂದು ತೆಂಗಿನಕಾಯಿನ್ನು ತುರಿದು ಕೊಳ್ಳಬೇಕು.ತಟ್ಟೆಯಲ್ಲಿ ಮಾಡುವುದು ಸುಲಭ,

ಈಗ ನೆನೆ ಹಾಕಿದ ತರಿಯನ್ನು ತೆಗೆದುಕೊಂಡು, ಒಂದು ತಟ್ಟೆಗೆ ಸಣ್ಣ ತಟ್ಟೆ ಅದರೆ 2 ಚಮಚ, ದೊಡ್ಡ ತಟ್ಟೆ ಅದರೆ 4 ಚಮಚ, ಮತ್ತು ನಮ್ಮ ಬೆರಳು ಮುಳುವಷ್ಷು ನೀರು, ಮೇಲೆ ತೆಂಗಿನ ತುರಿ , ಪುಡಿ ಮಾಡಿದ ಎಲ್ಲಕ್ಕಿ ಸಲ್ಪ, ಅದರ ಪಾತ್ರದಲ್ಲಿ (ಸೇಕಲದಲ್ಲಿ). ಇಡುವಾಗ ,ಕೆಳಗೆ ನೀರು ಹಾಕಬೇಕು, ಅದರ ಮೇಲೆ ಒಂದು ತಟ್ಟೆ ಬರುತ್ತದೆ,ಅದನ್ನು ಇಟ್ಟು ,ಹಿಟ್ಟಿನ ಒಂದು ತಟ್ಟೆ ಇಟ್ಟು ಎರಡು ಕಡ್ಡಿಯನ್ನು ಅದರ ಮೇಲೆ ಇಡಬೇಕು … ಹೀಗೆ ಎಲ್ಲವನ್ನು ಮಾಡಿ, ಮುಚ್ಚಳ ಮುಚ್ಚಿ 25 ನಿಮಿಷಗಳ ಕಾಲ ಬೇಯಲು ಬಿಡಿ.

ಆರಿದ ನಂತರ ಬೇಕಾದ ಆಕಾರಕ್ಕೆ ಅನುಗುಣವಾಗಿ ಕತ್ತರಿಸಿ, ಕೋಳಿ, ಅಥವಾ ಕಡಲೆ ಸಾರಿನ ಜೊತೆ ಸೇವಿಸಿ.

ಬರಹ :ಕೊಳ್ಳಿಮಾಡ ರಾಕಿ