ಫೆ.5 ಮತ್ತು 6 ರಂದು ತಲಕಾವೇರಿ ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

25/01/2021

ಮಡಿಕೇರಿ ಜ.25 : ಫೆ.6 ರಂದು ರಾಷ್ಟ್ರಪತಿ ಅವರು ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಫೆ.5 ಮತ್ತು 6 ರಂದು ತಲಕಾವೇರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮನವಿ ಮಾಡಿದ್ದಾರೆ.

ರಾಷ್ಟ್ರಪತಿಗಳು ಪವಿತ್ರ ಪುಣ್ಯಕ್ಷೇತ್ರ ತಲಕಾವೇರಿ ದೇವಾಲಯಕ್ಕೆ ಭೇಟಿ ನೀಡಲಿದ್ದು, ತಲಕಾವೇರಿ ದೇವಾಲಯದ ಇತಿಹಾಸ, ವಿಶೇಷತೆ ಬಗ್ಗೆ ಮಾಹಿತಿ ನೀಡಬೇಕು. ಹೆಲಿಪ್ಯಾಡ್ ನಿರ್ಮಾಣ, ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವುದು. ದೇವಾಲಯದಲ್ಲಿ ರಾಷ್ಟ್ರಪತಿ ಅವರ ಕಚೇರಿಯಿಂದ ಬಂದಿರುವ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.