ವಿಶೇಷ ಚೇತನರಿಗೆ ಸಲಕರಣೆ ವಿತರಣೆ : ನಮ್ಮ ಸಾಧನೆಗಳು ನಮಗೆ ಸಮಾಜದಲ್ಲಿ ಗೌರವವನ್ನು ತಂದು ಕೊಡುತ್ತದೆ : ಡಾ. ಕೆ. ಚಂದ್ರಶೇಖರ್

January 26, 2021

ಮಡಿಕೇರಿ ಜ.26 : ವಿಶೇಷ ಚೇತನರು ನಿಜಕ್ಕೂ ವಿಶೇಷರೇ, ಸಾಮಾನ್ಯರಂತಿಲ್ಲದೆ ಸಾಧಕರಾಗಿ ಬದುಕುವವರು. ನಮ್ಮ ಸಾಧನೆಗಳು ನಮಗೆ ಸಮಾಜದಲ್ಲಿ ಗೌರವವನ್ನು ಮತ್ತು ಸನ್ಮಾನವನ್ನು ತಂದು ಕೊಡುತ್ತದೆ ಎಂದು ವಿವೇಕಾನಂದ ಯುತ್ ಮೂವ್ ಮೆಂಟ್‍ನ ಸ್ಥಾಪಕ ಸದಸ್ಯ ಹಾಗೂ ಪ್ರಸ್ತುತ ಖಜಾಂಚಿ ಡಾ. ಕೆ ಚಂದ್ರಶೇಖರ್ ನುಡಿದರು.
ಗೋಣಿಕೊಪ್ಪಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ ಮತ್ತು ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ನಡೆದ ವಿಶೇಷ ಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸಾ ಯೋಜನೆಯಂತೆ ವಿಶೇಷ ಚೇತನರಿಗೆ ಸಲಕರಣೆಗಳ ವಿತರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ನಾವು ಸಮಾಜದಿಂದ ಏನನ್ನಾದರೂ ಪಡೆದರೆ ಅದನ್ನು ಬೇರೆಯವರೀಗೂ ನೀಡಿದರೆ ಮಾತ್ರ ಅದು ಸದುಪಯೋಗವಾದಂತಾಗುತ್ತದೆ. ಆದ್ದರಿಂದ ಇಂದು ಪಡೆದ ಪಸ್ತುಗಳ ಮಾಹಿತಿಯನ್ನು ಇತರ ವಿಶೇಷ ಚೇತನರಿಗೆ ನೀಡುವ ಮೂಲಕ ಅವರಿಗೂ ಪ್ರಯೋಜನವಾಗುವಂತೆ ಮಾಡಿದರೆ ಅದೇ ಸಮಾಜಸೇವೆಯಾಗುತ್ತದೆ ಎಂದರು.
ವಿರಾಜಪೇಟೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಹೆಚ್.ಆರ್. ಮಾತನಾಡಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುತಿದ್ದಾರೆ, ಅವರು ನೀಡುತ್ತಿರುವ ಸಲಕರಣೆಗಳು ಉತ್ತಮ ಗುಣಮಟ್ಟದ್ದಾಗಿದ್ದು, ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದರು. ವಿಶೇಷ ಚೇತನರು ಪ್ರಯತ್ನಿಸಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಇತ್ತಿಚೆಗೆ ಐಎಎಸ್ ಪದವಿ ಪಡೆದ ಕುರುಡಿ ಪ್ರಾಂಜಲ್ ಪಾಟೀಲ್ ಸಾಕ್ಷಿಯಾಗುತ್ತಾರೆ ಎಂದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ ವಿಶೇಷ ಚೇತನರಿಗೆ ಯಾವುದಾದರೂ ಅಂಗ ಊನತೆ ಇದ್ದರೆ ಅದಕ್ಕೆ ಬದಲಾಗಿ ಬೇರೆನಾದರೂ ವಿಶೇಷ ಅರ್ಹತೆ ಇರುತ್ತದೆ. ಅದು ಏನು ಎಂದು ಗುರುತಿಸಿ ಅದನ್ನು ಪೆÇ್ರೀತ್ಸಾಹಿಸಿದರೆ ಅವರು ಆ ಕ್ಷೇತ್ರದಲ್ಲಿ ಅಗ್ರಮಾನ್ಯರಾಗುತ್ತಾರೆ. ಅದಕ್ಕೆ ಸಾಕ್ಷಿ ಪದ್ಮಶ್ರೀ ಪಡೆದ ಪರ್ವತಾರೋಹಿ ವಿಶೇಷ ಚೇತನೆ ಅರುಣಿಮಾ ಸಿನ್ಹ ರವರು ಎಂದರು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ಮೂಕಳೇರ ಬೀಟಾ ಲಕ್ಷಣ್ ರವರು ಮಾತನಾಡಿ, ರೋಟರಿ ಸಂಸ್ಥೆಯು ಪೆÇೀಲಿಯೊ ನಿವಾರಣಾ ಕಾರ್ಯಕ್ರಮವನ್ನು ಪ್ರತಿವರ್ಷ ತಪಸ್ಸಿನಂತೆ ಆಚರಿಸುತಿದ್ದು, ಅದರಿಂದ ಪೆÇೀಲಿಯೋ ಭಾದಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪೆÇೀಲಿಯೋದಿಂದ ಆಗುವ ಅಂಗವೈಕಲ್ಯ ಕಡಿಮೆಯಾಗಿದೆ ಎಂದರು.
ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ನಿಮ್ಮ ಊನತೆಯನ್ನೇ ಗ್ರಹಿಸದೆ ಕೆಲಸಮಾಡಿದರೆ ಏನನ್ನೂ ಸಾಧಿಸಲು ಸಾಧ್ಯವಿದೆ. ಅಂಗ ವೈಕಲ್ಯ ಶಾಪವಲ್ಲ ಅದನ್ನು ವರವನ್ನಾಗಿಸಿಕೊಳುವ ಶಕ್ತಿ ನಿಮ್ಮಲಿದೆ ಅದನ್ನು ಉಪಯೋಗಿಸಿಕೊಳ್ಳಿ ಎಂದರು
ಸಂಸ್ಥೆಯ ಜಿಲ್ಲಾ ಅಧಿಕಾರಿ ಅಂಕಚಾರಿ , ತಾಲೂಕು ವಿಶೇಷ ಚೇತನ ಸಂಯೋಜಕ ಪ್ರಥಮ್, ರೋಟರಿ ಸಂಸ್ಥೆಯ ಕಿಶೋರ್ ಮಾದಪ್ಪ, ಇಮ್ಮಿ ಉತ್ತಪ್ಪ , ಚಂದನ್ ಕಾಮತ್ ಉಪಸ್ಥಿತರಿದ್ದರು.

error: Content is protected !!