ಸುವರ್ಣ ಸೌಧದ ಮುಂಭಾಗ ಟ್ರ್ಯಾಕ್ಟರ್‌ನಲ್ಲಿಯೇ ರಾಷ್ಟ್ರ ಧ್ವಜಾರೋಹಣಗೈದ ರೈತರು

January 26, 2021

ಬೆಳಗಾವಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನ ಸೌಧ ಎದುರು ರೈತರು ಟ್ರಾಕ್ಟರ್‌ನಲ್ಲಿಯೇ ರಾಷ್ಟ್ರ ಧ್ವಜಾರೋಹಣ ಮಾಡಿದರು.

ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಟ್ರ್ಯಾಕ್ಟರ್‌ ಜಾಥಾ ಹೊರಡುವ ಮುನ್ನ ರಾಷ್ಟ್ರ ಧ್ವಜಾರೋಹಣ ಮಾಡಿ ಬಳಿಕ ರಾಷ್ಟಗೀತೆ ಹಾಡಿದರು. ಈ ವೇಳೆ ನೂರಾರು ರೈತರು ಭಾಗವಹಿಸಿದ್ದರು. ರೈತರ ಪರ ಘೋಷಣೆಗಳನ್ನು ಕೂಗಿದ ರೈತರು ಸರ್ಕಾರದ ವಿರುದ್ಧವೂ ಘೋಷಣೆ ಕೂಗಿದರು.

error: Content is protected !!