ಜೈಲಿನಿಂದ ನಟಿ ರಾಗಿಣಿ ದ್ವಿವೇದಿ ಬಿಡುಗಡೆ

26/01/2021

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ತತ 144 ದಿನಗಳ ಕಾಲ ಜೈಲಿನಲ್ಲಿದ್ದ ನಟಿ ರಾಗಿಣಿ ದ್ವಿವೇದಿಗೆ ಇಂದು ಬಿಡುಗಡೆ ಭಾಗ್ಯ ದೊರೆತಿದ್ದು, ಕೆಲವು ದಿನಗಳ ಹಿಂದೆಯೇ ರಾಗಿಣಿಗೆ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನು ಮಂಜೂರು ಆಗಿದ್ದರೂ ಕಾರಣಾಂತರಗಳಿಂದ ಅವರ ಬಿಡುಗಡೆ ವಿಳಂಬವಾಗಿತ್ತು. ಜನವರಿ 21ರಂದು ಜಾಮೀನು ಸಿಕ್ಕಿದೆ. ಸುಪ್ರೀಂಕೋರ್ಟ್‌ ಆದೇಶ ಪ್ರತಿಯನ್ನು ಬೆಂಗಳೂರಿನ ಎನ್‌ಡಿಪಿಎಸ್‌ ನ್ಯಾಯಾಲಯಕ್ಕೆ ತಲುಪಿಸಲು ವಿಳಂಬವಾಗಿದೆ. ಶುಕ್ರವಾರದಂದು (ಜ.22) ಆದೇಶ ಪ್ರತಿ ತಲುಪಿದೆ. ಆದರೆ, ಕೋವಿಡ್‌-19 ನಿಯಮಗಳ ಪ್ರಕಾರ ಪ್ರತಿಯನ್ನು ಡಬ್ಬದಲ್ಲಿ ಹಾಕಿ ಸ್ಯಾನಿಟೈಸ್ ಮಾಡಬೇಕು. ನಂತರವೇ ನ್ಯಾಯಾಧೀಶರ ಸಮ್ಮುಖದಲ್ಲಿ ಇರಿಸಲಾಗುತ್ತದೆ. ಈ ಪ್ರಕ್ರಿಯೆಗಳು ಶುಕ್ರವಾರ ಪೂರ್ಣಗೊಂಡಿಲ್ಲ. ಜ.23 ನಾಲ್ಕನೇ ಶನಿವಾರ ಆಗಿದ್ದ ಕಾರಣ ಸರ್ಕಾರಿ ರಜೆ. ನ್ಯಾಯಾಲಯ ಕಾರ್ಯ ನಿರ್ವಹಿಸುವುದಿಲ್ಲ. ಭಾನುವಾರ ಕೂಡ ರಜೆ ಇರುವ ಕಾರಣ ಸೋಮವಾರ ಬೆಳಗ್ಗೆ ನ್ಯಾಯಾಲಯವೂ ಜಾಮೀನು ಆದೇಶ ಪ್ರತಿ ಪರಿಶೀಲಿಸಿ ಬಿಡುಗಡೆ ಮಾಡಲು ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡುತ್ತದೆ. ಹೀಗಾಗಿ, ಸೋಮವಾರ (ಜ.25) ಮಧ್ಯಾಹ್ನದ ನಂತರವೇ ರಾಗಿಣಿ ಜೈಲಿನಿಂದ ಹೊರಬರಲಿದ್ದಾರೆ. ಇದೀಗ ನಟಿಗೆ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗುವ ಅವಕಾಶ ಸಿಕ್ಕಿದೆ.