ವಿರಾಜಪೇಟೆಯಲ್ಲಿ 72ನೇ ಗಣರಾಜ್ಯೋತ್ಸವ ಸಂಭ್ರಮ

January 26, 2021

ವಿರಾಜಪೇಟೆ:ಜ:26: ಭಾರತ ದೇಶವು ಹಲವು ವೈವಿದ್ಯಗಳಿಂದ ಕೂಡಿದ್ದು, ಏಕತೆ ಮತ್ತು ಅಖಂಡತೆಗೆ ಕಟಿಬದ್ಧರಾಗಿ ಸೇವೆಸಲ್ಲಿಸುವಂತಾಗಬೇಕು ಎಂದು ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಆರ್.ಯೋಗಾನಂದ ಕರೆ ನೀಡಿದ್ದಾರೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವಿರಾಜಪೇಟೆ ವತಿಯಿಂದ ನಗರದ ತಾಲ್ಲೂಕು ಮೈದಾನದಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿಶ್ವದಲ್ಲಿನ ಪ್ರತಿಯೋಂದು ರಾಷ್ಟ್ರಗಳು ತನ್ನ ಆಡಳಿತ ವ್ಯವಸ್ಥೆಯನ್ನು ಸೂಕ್ತ ಹಾಗೂ ಕ್ರಮಬದ್ಧವಾಗಿ ನಡೆಸಲು ಬಯಸುತ್ತದೆ. ಸಂವಿಧಾನವು ಒಂದು ರಾಷ್ಟ್ರದ ಮೂಲ ವ್ಯವಸ್ಥೆಯನ್ನು ವಿವರಿಸುವ ದಾಖಲೆಯಾಗಿದೆ. ರಾಜ್ಯಾಡಳಿತದ ನೀತಿ ನಿಯಮಗಳನ್ನು ವಿವರಿಸುವುದರೊಂದಿಗೆ ಸರ್ಕಾರದ ಸ್ವರೂಪ ಅದರ ಅಂಗ ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸುತ್ತದೆ. ಸಂವಿಧಾನವು ದೇಶದ ಮೂಲಭೂತ ಕಾನೂನು ಆಗಿರುವುದರಿಂದ ಅದು ಮಹತ್ವಪೂರ್ಣ ದಾಖಲೆಯಂತಾಗುತ್ತದೆ ಎಂದರು.

ಭಾರತದ ಸಂವಿಧಾನ 442 ವಿಧಿಗಳನ್ನು 12 ಪರಿಚ್ಚೇದಗಳನ್ನು ಹೊಂದಿದ್ದು ಭಾರತದ ಪ್ರಜೆಗಳಾದ ನಾವುಗಳು ಸಂವಿಧಾನಕ್ಕೆ ಗೌರವ ಕೊಡಬೇಕು. ಸಂವಿಧಾನವೇ ಶ್ರೇಷ್ಠ ಅದನ್ನು ಯಾರೂ ಮೀರುವಂತಿಲ್ಲ ಎಂದರು.

ವೇದಿಕೆಯಲ್ಲಿ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಸಿ.ಟಿ. ಜಯಕುಮಾರ್, ಕ್ಷೇತ್ರ ಶೀಕ್ಷಣಾಧಿಕಾರಿ ಶ್ರೀಶೈಲ ಬೆಳಗಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ಮದೋಶ್ ಪೂವಯ್ಯ, ಪಟ್ಟಣ ಪಂಚಾಯಿತಿ ಉಪಧ್ಯಕ್ಷ ಕೆ.ಬಿ.ಹರ್ಷವರ್ಧನ್, ಪ.ಪಂ ಮುಖ್ಯಧಿಕಾರಿ ಶ್ರೀಧರ್ ಹಾಗೂ ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!