ಚನ್ನಮ್ಮ ಪ್ರೌಢಶಾಲೆಯಲ್ಲಿ ಸುಭಾಶ್‍ಚಂದ್ರ ಬೋಸ್ ಜನ್ಮದಿನಾಚರಣೆ

January 26, 2021

ಮಡಿಕೇರಿ ಜ. 26 : ಸೋಮವಾರಪೇಟೆ ಸಮೀಪದ ಮಸಗೋಡು ಚನ್ನಮ್ಮ ಪ್ರೌಢಶಾಲೆಯಲ್ಲಿ ನಿವೃತ್ತ ನೌಕರರ ಸಂಘದ ವತಿಯಿಂದ ಶಾಲಾ ಸಹಯೋಗದಲ್ಲಿ ಸುಭಾಶ್‍ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ವಹಿಸಿದ್ದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಚ್.ಜಿ. ಕುಟ್ಟಪ್ಪ, ಕಾರ್ಯದರ್ಶಿ ಆನಂದ, ಖಜಾಂಚಿ ಸಿ.ಬಿ. ತಿಮ್ಮಯ್ಯ, ಸಲಹೆಗಾರರಾದ ಎಂ.ಎ. ವೀರಪ್ಪ, ಮಾಜಿ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಸಂತೋಷ್ ಇದ್ದರು.

error: Content is protected !!