ಗೂನಡ್ಕ ತೆಕ್ಕಿಲ್ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

January 26, 2021

ಮಡಿಕೇರಿ ಜ.26 : ಗೂನಡ್ಕ ತೆಕ್ಕಿಲ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ವತಿಯಿಂದ 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಲೆಯ ಸ್ಥಾಪಕ ಟಿ.ಎಂ.ಶಾಹಿದ್ ತೆಕ್ಕಿಲ್ ಅವರು ಧ್ವಜರೋಹಣ ನೇರವೇರಿಸಿ ಮಾತನಾಡಿದರು. ಸಂವಿಧಾನದ ಆಶಯಗಳಿಂದ ದೇಶದ ರಕ್ಷಣೆಯಾಗುತ್ತಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಶ್ಲಾಘನಾರ್ಹವೆಂದರು. ಸಂವಿಧಾನ ನೀಡಿರುವ ಮಾರ್ಗದರ್ಶನದ ಮೂಲಕವೇ ದೇಶ ಅಭಿವೃದ್ಧಿ ಹೊಂದಿದ್ದು, ರಾಷ್ಟ್ರ ರಕ್ಷಣೆ ಪ್ರತಿಯೊಬ್ಬರ ಪ್ರಜೆಯ ಕರ್ತವ್ಯವಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರುಗಳಾದ ವಾಣಿ, ದಿನಕರ ಸಣ್ಣಮನೆ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಗಣರಾಜ್ಯೋತ್ಸವ ಪ್ರಯುಕ್ತ ಸಿಂಹಿ ಹಂಚಲಾಯಿತು.

error: Content is protected !!