ಪತ್ರಿಕಾ ಭವನದಲ್ಲಿ 72ನೇ ಗಣರಾಜ್ಯೋತ್ಸವ : ಗಣತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸೋಣ : ಮನುಶೆಣೈ ಕರೆ

January 27, 2021

ಮಡಿಕೇರಿ ಜ.27 : ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಗಣತಂತ್ರ ವ್ಯವಸ್ಥೆ ನಾಡಿನ ಜನರನ್ನು ಸೌಹಾರ್ದಯುತವಾಗಿ ಬೆಸೆಯುವ ಮೂಲಕ ರಾಷ್ಟ್ರವನ್ನು ಮತ್ತಷ್ಟು ಸುಭದ್ರವಾಗಿ ಕಟ್ಟಿ ಬೆಳೆಸುವಂತಾಗಲೆನ್ನುವ ಆಶಯವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನು ಶೆಣೈ ವ್ಯಕ್ತಪಡಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿತ 72ನೇ ಗಣರಾಜ್ಯೋತ್ಸವ ಸಂದರ್ಭ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಮಾತನಾಡಿದ ಅವರು, ಸಮಾನತೆ, ಸಹಬಾಳ್ವೆಯ ಪರಿಕಲ್ಪನೆಯಡಿ ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಕಾರ್ಯರೂಪಕ್ಕೆ ತರುವಂತಾಗಲೆಂದು ಆಶಿಸಿದರು.
ಸರಳ ಸಮಾರಂಭದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಟ್ರಸ್ಟಿಗಳು ಹಾಗೂ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷರಾದ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಖಜಾಂಚಿ ಎಂ.ಪಿ. ಕೇಶವ ಕಾಮತ್, ಪತ್ರಿಕಾ ಭವನದ ಸಿಬ್ಬಂದಿಗಳಾದ ರಾಜೇಶ್, ಸವಿತಾ, ಉದ್ಯಮಿಗಳಾದ ರೆಹಮಾನ್, ರಾಮಣ್ಣ, ಲೀಲಾ, ಅಶ್ರಫ್ ಮತ್ತು ಪುಟಾಣಿ ಚರಿತ ಉಪಸ್ಥಿತರಿದ್ದರು.

error: Content is protected !!