ಕಲ್ಲುಮೊಟ್ಟೆ ಆದರ್ಶ ನಗರದಲ್ಲಿ ಗಣರಾಜ್ಯೋತ್ಸವ ಆಚರಣೆ : ಸಾಧಕರಿಗೆ ಸನ್ಮಾನ

January 27, 2021

ಮಡಿಕೇರಿ ಜ.27 : ಕಲ್ಲುಮೊಟ್ಟೆ ಆದರ್ಶ ನಗರದ ಅಂಬೇಡ್ಕರ್ ಯುವಕ ಸಂಘದ ವತಿಯಿಂದ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಜೀಜ್ ಸಂಘ ನಡೆದು ಬಂದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಸಮಾಜ ಸೇವಕರಾದ ಬಾಳೆಯಡ ದಿವ್ಯ ಮಂದಪ್ಪ ಮತ್ತು ಮಡಿಕೇರಿಯ ಮಹಮ್ಮದ್ ಮುಸ್ತಫಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲ ಹಾಗೂ ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಸಂಚಾಲಕ ಕೆ.ಎಂ. ಅಬ್ದುಲ್ಲಾ, ಪ್ರಮುಖರಾದ ಪುಲಿಯಂಡ ಮೊಯ್ದು, ಕರೀಂ, ಹುಸೇನ್, ಮೊಮ್ಮದ್, ಟಿ.ಪಿ ರಮೇಶ್, ಇಂದಿರಾ, ಪುಲಿಯಂಡ ಮೊಹಮ್ಮದ್ ಮತ್ತು ನಾಪೆÇೀಕ್ಲು ಆಟೋ ಚಾಲಕರ ಸಂಘದ ಅಧ್ಯಕ್ಷ ರಜಾಕ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಂಘದ ಸದಸ್ಯ ಆಲಿ ಸ್ವಾಗತಿಸಿದರು. ನಿರ್ದೇಶಕ ಬಶೀರ್ ಆಲಿ ನಿರೂಪಿಸಿ ವಂದಿಸಿದರು.

error: Content is protected !!