ಅಪರ ಸರ್ಕಾರಿ ವಕೀಲೆ ಕಂಜಿತಂಡ ಅನಿತಾ ದೇವಯ್ಯರಿಗೆ ಸನ್ಮಾನ

January 27, 2021

ಮಡಿಕೇರಿ ಜ.27 : ವಿರಾಜಪೇಟೆ ತಾಲ್ಲೂಕು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಸರ್ಕಾರಿ ವಕೀಲರಾದ ಕಂಜಿತಂಡ ಅನಿತಾ ದೇವಯ್ಯ ಅವರನ್ನು ಪೊನ್ನಂಪೇಟೆ ವಕೀಲರ ಸಂಘದ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ಎಸ್.ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಜಿ.ಲೋಕೇಶ್ ಅವರು ಮತ್ತು ಪೊನ್ನಂಪೇಟೆ ನ್ಯಾಯಾಲಯದ ನ್ಯಾಯಾಧೀಶರಾದ ಗಿರಿಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನ್ಯಾಯಾಧೀಶರಾದ ಎಂ.ಜಿ.ಲೋಕೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರಾದ ಪ್ರತೀಕ್ಷ ಅವರು ಕಂಜಿತಂಡ ಅನಿತಾ ಅವರ ಪರಿಚಯ ಮತ್ತು ಸಾಧನೆ ಪರಿಚಯಿಸಿದರು. ವಕೀಲರಾದ ಪುಷ್ಪರಾಜ್ ಅವರು ಮಾತನಾಡಿದರು. ವಕೀಲರಾದ ಜ್ಯೋತಿ ಅವರು ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಎಂ.ಜಿ.ರಾಕೇಶ್ ಅವರು ವಂದಿಸಿದರು. ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

error: Content is protected !!