ಮಡಿಕೇರಿಯಲ್ಲಿ ಕೋವಿಡ್ ವಾರ್ ರೂಮ್ ಉದ್ಘಾಟನೆ

January 27, 2021

ಮಡಿಕೇರಿ ಜ.27 : ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಜಿಲ್ಲಾ ಸರ್ವೇಕ್ಷಣಾ ಕಚೇರಿಯಲ್ಲಿ ಕೋವಿಡ್ ವಾರ್ ರೂಮ್ ನ್ನು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಬುಧವಾರ ಉದ್ಘಾಟಿಸಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಾ.ಗೋಪಿನಾಥ್, ಡಾ.ಮಹೇಶ್, ಡಾ.ಆನಂದ್, ಡಾ.ಯತಿರಾಜು, ಡಾ.ಮಂಜುನಾಥ್, ಇತರರು ಇದ್ದರು.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕದಲ್ಲಿ ಕೋವಿಡ್-19 ಸಂಬಂಧಿಸಿದಂತೆ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ, ವಿದ್ಯಾರ್ಥಿಗಳಾದ ಭೂಮಿಕಾ, ದರ್ಶನ್, ಧ್ಯಾನ್ ದೇವಯ್ಯ, ಕರುಣ್ ಮಂದಣ್ಣ, ಸುಜೀತ್ ಕುಮಾರ್, ಮಿಥುನ್, ವಿಜಯ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

error: Content is protected !!