ಸೋಮವಾರಪೇಟೆ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಜಯಂತಿ ಶಿವಕುಮಾರ್ ಆಯ್ಕೆ

January 27, 2021

ಮಡಿಕೇರಿ ಜ.27 : ಸೋಮವಾರಪೇಟೆ ಪ.ಪಂ ಸ್ಥಾಯಿಸಮಿತಿ ಅಧ್ಯಕ್ಷೆಯಾಗಿ ಜಯಂತಿ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಳಿನಿಗಣೇಶ್ ರವರ ಅದ್ಯೆಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿಸಮಿತಿ ಅದ್ಯೆಕ್ಷರ ಚುನಾವಣೆ ನಡೆಯಿತು.
ಒಂದು ವರ್ಷದ ಅವಧಿಯ ಸ್ಥಾಯಿಸಮಿತಿಗೆ ಜಯಂತಿ ಶಿವಕುಮಾರ್ ರವರ ಹೆಸರನ್ನು ಕಾಂಗ್ರೆಸ್‌ನ ಶೀಲಾಡಿಸೋಜ ಸೂಚಿಸಿದರೆ ಬಿ.ಜೆ.ಪಿ ಇಂದ ಶುಭಕರ ಅವರ ಹೆಸರನ್ನು ಮಹೇಶ್ ಸೂಚಿಸಿದರು. ಇಬ್ಬರ ಪೈಕಿ ಯಾರು ಅದ್ಯೆಕ್ಷರಾಗಬೇಕು ಕೈಎತ್ತಿ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು. ಜಯಂತಿಪರವಾಗಿ ಉಪಾದ್ಯೆಕ್ಷಕಾಂಗ್ರೆಸ್‌ನ ಬಿ.ಸಂಜೀವ, ಶೀಲಾಡಿಸೋಜ, ಬಿ.ಸಿ.ವೆಂಕಟೇಶ್, ಜಯಂತಿ ಸರಿದಂತೆ ಜೆ.ಡಿ.ಎಸ್. ನ ಜೀವನ್,ನಾಗರತ್ನ ಸರೆದಂತೆ ಏಳು ಮಂದಿ ಕೈಎತ್ತಿದರು.
ಬಿ.ಜೆ.ಪಿ ಪರವಾಗಿ ನಳಿನಿಗಣೇಶ ,ಚಂದ್ರು,ಶುಭಕರ,ಮಹೇಶ್ ಸೇರಿದಂತೆ ನಾಲ್ಕು ಮಂದಿ ಇದ್ದಿದ್ದರಿಂದ ಜಯಂತಿಶಿವಕುಮಾರ್ ಆಯ್ಕೆಯಾದರು.
ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರಾದ ಎಸ್.ಮಹೇಶ್, ಶರತ್,ಅಭಿಯಂತರ ಹೇಮಂತ್,ಆರೋಗ್ಯನಿರೀಕ್ಷಕ ಉದಯಕುಮಾರ್,ವಿಷಯ ಸಂಗ್ರಾಹಕಿ ರೂಪಾಮಹೇಂದ್ರಕುಮಾರ್,ಅಕೌಂಟೆಂಟ್ ಭಾವನಾ ಉಪಸ್ಥಿತರಿದ್ದರು.

error: Content is protected !!