ಕಲ್ಲುಬಾಣೆ ಮದರಸದಲ್ಲಿ ನಿವೃತ್ತ ಬಿಎಸ್‍ಎಫ್ ಯೋಧ ಸಾಜು ಅವರಿಗೆ ಸನ್ಮಾನ

January 27, 2021

ಮಡಿಕೇರಿ ಜ.27 : ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ಬಾಲ ಸಂಘಟನೆಯಾದ ಎಸ್.ಕೆ.ಎಸ್.ಬಿ.ವಿ ದಾರುಲ್ ಇಸ್ಲಾಂ ಮದರಸದ ಕಲ್ಲುಬಾಣೆ ಶಾಖೆಯ ವತಿಯಿಂದ ಇಲ್ಲಿನ ಮದರಸದಲ್ಲಿ ನಿವೃತ್ತ ಬಿಎಸ್‍ಎಫ್ ಯೋಧ ಸಾಜು ಅವರನ್ನು ಸನ್ಮಾನಿಸಲಾಯಿತು.
ಬಾಲಕರೇ ಸ್ವ-ಇಚ್ಛೆಯಿಂದ ಸಂಘಟನೆ ರಚಿಸಿ ಸಮಾಜಮುಖಿಯಾಗಿ ಬೆಳೆಯಬೇಕು ಎನ್ನುವ ಮಹತ್ತರ ಗುರಿಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯೋಧರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಇದೇ ಕಾರಣಕ್ಕೆ ನಿವೃತ್ತ ಯೋಧ ಸಾಜು ಅವರನ್ನು ಸನ್ಮಾನಿಸಲಾಗಿದೆ ಎಂದು ದಾರುಲ್ ಇಸ್ಲಾಂ ಮದರಸದ ಮುಖ್ಯೋಪಾದ್ಯಾಯರಾದ ಹನೀಫ ಫೈಝಿ ಗುಂಡಿಕೆರೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾರುಲ್‍ಇಸ್ಲಾಂ ಮದರಸದ ಮುಖ್ಯೋಪಾಧ್ಯಾಯ ಹನೀಫ್ ಫೈಝಿ ಗುಂಡಿಕೆರೆ, ಜಮಾಹತ್ ಅಧ್ಯಕ್ಷ ಅಪ್ಸಲ್ ಪಿ.ಕೆ. ಗ್ರಾಮ ಪಂಚಾಯತ್ ಸದಸ್ಯ ಕೆ.ಟಿ.ಬಷೀರ್ ಹಾಗೂ ಶಹದೀರ್, ಶಪೀಕ್, ಅಪ್ಸಲ್ ಶಫ್ವನ್, ಸಂಘಟನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!