ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸಿದ ಹರೀಶ್ ಜಿ. ಆಚಾರ್ಯ

January 28, 2021

ಮಡಿಕೇರಿ ಜ.28 : ಜಿಲ್ಲೆಯಲ್ಲಿ ಹಬ್ಬಿರುವ ಮಹಾಮರಿ ಕೊರೋನದಿಂದ ಆತಂಕದಲ್ಲಿ ದಿನಕಳೆಯುವಂತಾಗಿದ್ದು, ಅದೆಷ್ಟೋ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಸಂದರ್ಭ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆಯಿಟ್ಟು ಕೊಡಗಿನಲ್ಲಿ ಕೋವಿಡ್‍ಗೆ ಯಾರು ಬಲಿಯಾಗಬಾರದೆಂದು ಲಾಕ್‍ಡೌನ್ ಮೂಲಕ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿರುವುದು ಶ್ಲಾಘನೀಯ ಎಂದು ಪೀಪಲ್ಸ್ ಮೂಮೆಂಟ್ ಪಾರ್ ಹ್ಯೂಮನ್ ರೈಟ್ಸ್ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಆರೋಗು ಇಲಾಖೆ, ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳು ಹಾಗೂ ಕೋವಿಡ್ ಸಂದರ್ಭ ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಸಿದವರಿಗೆ ಕೊಡಗಿನ ಜನತೆ ಅಬಾರಿಯಾಗಿರಬೇಕಾಗಿದೆ.
ಕೊವೀಡ್‍ನಿಂದಾಗಿ ಹೆಸರು ಕೇಳಿದರೆ ದೂರ ಓಡುತ್ತಿದ್ದ ಜನರ ಮದ್ಯೆ ಕೊರೋನಾ ರೋಗಿಗ ಹತ್ತಿರ ನಿಂತು ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ದಾದಿಯರು ತಮ್ಮ ಮನಿ ಮಠ ಮರೆತು ಸಾಹಸ ಮೆರೆದಿದ್ದಾರೆ.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡದೆ ಕೇವಲ ಸರ್ಕಾರಿ ಆಸ್ಪತ್ರೆಯಿಂದಲೇ ಚಿಕಿತ್ಸೆ ನೀಡಿರುವುದು ಉತ್ತಮ.
ಈ ನಿರ್ಧರದಿಂದ ಜಿಲ್ಲಾಡಳಿತ ಕೊಡಗಿನಲ್ಲಿ ಹೆಚ್ಚು ಸಾವು ನೋವು ಸಂಭವಿಸದಂತೆ ಮಾಡಿದೆ. ಕೊಡಗಿನ ನಾಗರಿಕರು ಕೂಡಾ ಸುಮ್ಮನೆ ಬೀದಿಯಲ್ಲಿ ಓಡಾಡದೆ ಮನೆಯಲ್ಲಿಯೇ ಇದ್ದು, ಮನೆಮದ್ದು, ಕಾಶಯ ಇತ್ಯಾದಿಗಳನ್ನು ತಮ್ಮ ಜೀವ ರಕ್ಷಣೆಗೆ ಪಣ ತೊಟ್ಟಂತಿತ್ತು.
ಪತ್ರಿಕಾ ಮಾದ್ಯಮ, ಟಿವಿ ಮಾದ್ಯಮ ಹಾಗೂ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಜನರನ್ನು ಎಚ್ಚರಿಸಿ ಯಾವ ರೀತಿ ಮುನ್ನಡೆಯಬೇಕೆಂಬ ಮಾರ್ಗದರ್ಶನಗಳು ಮರೆಯುವಂತಿಲ್ಲ.
ಪೊಲೀಸ್ ಇಲಾಖೆ ಜನರೊಡನೆ ಸಂಘರ್ಷವಿಲ್ಲದೆ ಕಾರ್ಯ ನಿರ್ವಹಿಸಿದ್ದು ವಿಶೇಷ.
ಈ ಎಲ್ಲಾ ಜವಬ್ದಾರಿಯುತ ಜಿಲ್ಲಾಡಳಿತದಿಂದ ಹಾಗೂ ಸಿಬ್ಬಂದಿಗಳಿಂದ ಮಾಧ್ಯಮದವರಿಂದ ಹಾಗೂ ಆರೋಗ್ಯ ಇಲಾಖೆಯಿಂದ ಕೊರೋನಾವನ್ನು ನಿಯಂತ್ರಿಸಲು ಸಹಕಾರ ನೀಡಿದ ಎಲ್ಲಾ ವರ್ಗದವರಿಗೂ ಕೊಡಗಿನ ಜನತೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

error: Content is protected !!