ಸ್ತನ ಕ್ಯಾನ್ಸರ್‌ಗೆ ಹೊಸ ಔಷಧಿ ಸಂಶೋಧನೆ

28/01/2021

ಮೈಸೂರು: ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಬಹುದಾದ ಅಣು (ಡ್ರಗ್‌ ಸೀಡ್‌) ಅಭಿವೃದ್ಧಿಪಡಿಸಿರುವುದಾಗಿ ಮೈಸೂರು ವಿವಿ ಸಾವಯವ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಸವಪ್ಪ ತಿಳಿಸಿದ್ದಾರೆ.

ಎಎಂಟಿಎ ಹೆಸರಿನ ಅಣುವನ್ನು ಸಂಶೋಧಿಸಿದ್ದು, ಇದು ಸ್ತನ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುತ್ತಿರುವ ಔಷಧಕ್ಕಿಂತಲೂ ಪರಿಣಾಮಕಾರಿಯಾಗಿದೆ. ಎಎಂಟಿಎ ಔಷಧ ಬೀಜವನ್ನು ತಾವು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ತನ ಕ್ಯಾನ್ಸರ್‌ಗೆ ಪ್ರಸುತ್ತ ಬಳಕೆಯಲ್ಲಿರುವ ವಿಧಾನಗಳೆಂದರೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ವಿಕಿರಣ ಮತ್ತು ಹಾರ್ಮೋನಲ್‌ ಥೆರಪಿ.

ಕಿಮೋಥೆರಪಿ ವೇಳೆ ಈಗ ಬಳಕೆಯಲ್ಲಿರುವ ಔಷಧ ನೀಡಿದರೆ, ಕೆಲವು ವಾರಗಳ ಬಳಿಕ ಕ್ಯಾನ್ಸರ್‌ ಕೋಶಗಳು ಮತ್ತೆ ಬೆಳೆಯುವ ಸಾಧ್ಯತೆಗಳು ಇರುತ್ತವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬಯೋ ಇನ್ಫರ್ಮೆಟಿಕ್‌ ತಂತ್ರಜ್ಞಾನದಿಂದ ಹೊಸ ಡ್ರಗ್‌ ಸೀಡ್‌ (ಔಷಧಿ ಬೀಜ) ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ಬಸಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.