ಕಾಡಾನೆ ತುಳಿದು ಕಾರ್ಮಿಕ ಸಾವು : ಬಾಣಾವರದಲ್ಲಿ ಘಟನೆ

January 28, 2021

ಮಡಿಕೇರಿ ಜ.28 : ಆನೆ ತುಳಿತಕ್ಕೊಳಗಾಗಿ ಕಾರ್ಮಿಕರೊಬ್ಬರು ಸಾವಿಗೀಡಾಗಿರುವ ಘಟನೆ ಕೊಡಗಿನ ಗಡಿಭಾಗದ ಬಾಣಾವರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತರನ್ನು ಕೊಣನೂರು ಸಮೀಪದ ಚಿಕ್ಕಬೊಮ್ಮನಹಳ್ಳಿಯ ರೇವಣ್ಣ(38) ಎಂದು ಗುರುತಿಸಲಾಗಿದೆ.
ಸೋಮವಾರಪೇಟೆಯ ಸುತ್ತಮುತ್ತ ಕಾಫಿ ಲೋಡ್ ಮಾಡಲೆಂದು ರೇವಣ್ಣ ಹಾಗೂ ಇತರರು ತೆರಳಿದ್ದು, ರಾತ್ರಿ ಎರಡು ಬೈಕ್ ಗಳಲ್ಲಿ ಸೋಮವಾರಪೇಟೆ ಕಡೆಯಿಂದ ಮನೆಗೆ ಹೋಗುತ್ತಿದ್ದಾಗ ಕಾಡಾನೆಗಳು ಎದುರಾಗಿವೆ. ಈ ಸಂದರ್ಭ ಮೂವರು ಓಡಿ ಹೋಗಿದ್ದು, ರೇವಣ್ಣ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದಾರೆ.

error: Content is protected !!