ಮಾವುತನ ಮೇಲೆ ಸಾಕಾನೆ ದಾಳಿ : ದುಬಾರೆ ಸಾಕಾನೆ ಶಿಬಿರದಲ್ಲಿ ಘಟನೆ

January 28, 2021

ಮಡಿಕೇರಿ ಜ.28 : ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತನ ಮೇಲೆ ಸಾಕಾನೆ ದಾಳಿ ಮಾಡಿದ ಘಟನೆ ನಡೆದಿದೆ. ತೀವ್ರ ಗಾಯಗೊಂಡ ಮಾವುತ ವಿಜಯ್ (39) ಅವರನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಿಬಿರದ ಒಂದು ವರ್ಷದ ಸಾಕಾನೆ ಪಾರ್ಥನಿಗೆ ಆಹಾರ ನೀಡುವ ಸಂದರ್ಭ ಕಾಲಿನಿಂದ ತಳ್ಳಿದ ಪರಿಣಾಮ ವಿಜಯ್‍ನ ಎಡಗೈ ಮೂಳೆ ಮುರಿದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಮತ್ತು ಕಾರ್ಮಿಕರು ಗಾಯಾಳುವನ್ನು ತಕ್ಷಣ ಕುಶಾಲನಗರ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

error: Content is protected !!