ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣು : ವಿರಾಜಪೇಟೆಯಲ್ಲಿ ಘಟನೆ

28/01/2021

ಮಡಿಕೇರಿ ಜ.28 : ರಾಷ್ಟ್ರೀಕೃತ ಬ್ಯಾಂಕ್‍ವೊಂದರ ಉದ್ಯೋಗಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಮೂಲತಃ ತೆಲಂಗಾಣ ರಾಜ್ಯದ ನಿವಾಸಿಯಾಗಿರುವ, ಪ್ರಸ್ತುತ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ತಿಮ್ಮಯ್ಯ ಬಡಾವಣೆಯ ನಿವಾಸಿ ಬುರ್ಲ ಶರಣ್ (26) ಎಂಬುವವರೇ ನೇಣಿಗೆ ಶರಣಾಗಿರುವ ವ್ಯಕ್ತಿ.
ಬ್ಯಾಂಕ್ ಆಫ್ ಬರೋಡದ ಕರಡ ಗ್ರಾಮ ಶಾಖೆಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತಿದ್ದ ಶರಣ್ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.