ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾಗಿ ದಿಲನ್ ಚಂಗಪ್ಪ ಆಯ್ಕೆ

28/01/2021


ಮಡಿಕೇರಿ ಜ.28 : ನೂತನವಾಗಿ ಪೊನ್ನಂಪೇಟೆ ತಾಲ್ಲೂಕು ಜಾನಪದ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಘಟಕದ ಅಧ್ಯಕ್ಷರಾಗಿ ಪಿ.ಎಂ. ದಿಲನ್‍ಚಂಗಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಸಿ. ಗೀತಾ ನಾಯ್ಡು ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲಿನ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷರಾಗಿ ದಿಲನ್ ಚಂಗಪ್ಪ ಮತ್ತು ಇತರೆ ಪದಾಧಿಕಾರಿಗಳನ್ನು ಆಯ್ಕೆ ಮತ್ತು ವಿವಿಧ ಸಮಿತಿ ರಚನೆ ಮಾಡಲಾಯಿತು.

ದಕ್ಷಿಣ ಕೊಡಗು ಜಾನಪದ ಪರಿಷತ್‍ನ ಅಧ್ಯಕ್ಷರಾಗಿದ್ದ ಚೇಂದಂಡ ಸುಮಿ ಸುಬ್ಬಯ್ಯ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಎಂ.ಜಿ.ಮೋಹನ್ ಮತ್ತು ರಜನಿ ಎಸ್.ಎಂ. ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಜಂಟಿ ಕಾರ್ಯದರ್ಶಿ ಎಂ.ಕೆ. ಚಂದನ್‍ಕಾಮತ್, ಖಜಾಂಚಿ ಎಂ.ಪಿ.ಪ್ರಮೋದ್ ಕಾಮತ್, ನಿರ್ದೇಶಕರಾಗಿ ಡಾ.ಆಶಿಕ್ ಚಂಗಪ್ಪ, ರೀಟಾ ದೇಚಮ್ಮ, ಬಿ.ಎನ್.ಪ್ರಕಾಶ್, ಡಾ.ಜೆ.ಸೋಮಣ್ಣ, ವಿ.ಟಿ.ಶ್ರೀನಿವಾಸ್ ಹಾಗೂ ರತಿ ಅಚ್ಚಪ್ಪ, ಗೌರವ ಸಲಹೆಗಾರರಾಗಿ ಇಟ್ಟೀರ ಕೆ. ಬಿದ್ದಪ್ಪ, ಕೇಶವ ಕಾಮತ್, ಟಿ.ಎಲ್.ಶ್ರೀನಿವಾಸ್, ಜಗದೀಶ್ ಜೋಡುಬೀಟಿ, ದಿನೇಶ್ ಎನ್.ಎನ್, ರಫೀಕ್‍ತೂಚಮಕೇರಿ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭ ಯೋಜನಾ ಸಮಿತಿ ಸಂಚಾಲಕರನ್ನಾಗಿ ರೀಟಾ ದೇಚಮ್ಮ, ನಿಧಿ ಕ್ರೋಢೀಕರಣ ಸಮಿತಿ ಸಂಚಾಲಕರಾಗಿ ಎಂ.ಜಿ.ಮೋಹನ್, ಪ್ರಚಾರ ಸಮಿತಿ ಸಂಚಾಲಕರಾಗಿ ಜಗದೀಶ್‍ಜೋಡುಬೀಟಿ, ಕಲಾವಿದರ ಆಯ್ಕೆ ಸಮಿತಿ ವಿ.ಟಿ.ಶ್ರೀನಿವಾಸ್, ಸಾಂಸ್ಕøತಿಕ ಸಮಿತಿ ಟಿ.ಎಲ್.ಶ್ರೀನಿವಾಸ್, ಅಧ್ಯಯನ ಸಮಿತಿ ಸಂಚಾಲಕರಾಗಿ ಡಾ.ಜೆ.ಸೋಮಣ್ಣ ಹಾಗೂ ಸಂಘಟನಾ ಸಮಿತಿ ಸಂಚಾಲಕರನ್ನಾಗಿ ಬಿ.ಎನ್.ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಎಂ. ದಿಲನ್‍ಚಂಗಪ್ಪ ಅವರು ಮಾತನಾಡಿ, ತಿಂಗಳಿಗೊಂದು ಜಾನಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲರ ಸಹಕಾರ ಕೋರಿದರು. ಪೆÇನ್ನಂಪೇಟೆ ತಾಲ್ಲೂಕಿನಾದ್ಯಂತ ಪ್ರವಾಸ ಹಮ್ಮಿಕೊಂಡು ಎಲೆ ಮರೆಯ ಕಾಯಿಯಂತಿರುವ ಜನಪದ ಕಲಾವಿದರನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸ ಆಗಬೇಕೆಂದರು.

ಅಧ್ಯಯನ ಸಮಿತಿ ಸಂಚಾಲಕರಾದ ಡಾ.ಜೆ.ಸೋಮಣ್ಣ ಅವರು ಮಾತನಾಡಿ, ಆದಿವಾಸಿಗಳ ಹಾಡಿಗಳಲ್ಲಿ ವಿಭಿನ್ನ, ವಿಶೇಷವಾದ ಜನಪದ ಕಲಾವಿದರು ಇದ್ದಾರೆ. ಹಾಡಿಗಳಲ್ಲಿ ಜನಪದ ಉತ್ಸವವನ್ನು ದುಂದು ವೆಚ್ಚವಿಲ್ಲದೆ ನಿಭಾಯಿಸಬಹುದಾಗಿದೆ. ಹಾಡಿಯ ಮಕ್ಕಳ ಬದುಕು, ಮಣ್ಣಿನ ಸೊಗಡನ್ನು ಜನಪದ ಕಲಾತಂಡದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಕರ್ನಾಟಕ ಜಾನಪದ ಪರಿಷತ್, ಇತ್ಯಾದಿ ಸರ್ಕಾರಿ ಅನುದಾನವನ್ನು ಬಳಸಿಕೊಂಡು ಉತ್ತಮ ಜನಪದ ಕಾರ್ಯಕ್ರಮವನ್ನು ಹಾಡಿಗಳಲ್ಲಿ ಏರ್ಪಡಿಸಲು ಅವಕಾಶವಿದೆ. ಆದಿವಾಸಿಗಳಲ್ಲದೆ ಕೊಡವ, ಗೌಡ, ಮಲಯಾಳಿ ಇತ್ಯಾದಿ ಜನಾಂಗದ ಜನಪದ ಕಲೆಗಳನ್ನೂ ಬೆಳಕಿಗೆ ತರಲು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.