ಶುದ್ಧ ಕನ್ನಡ ನಾಮಫಲಕ ಹಾಗೂ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಕನ್ನಡ ಜಾಗೃತಿ ಸಮಿತಿ ಒತ್ತಾಯ

28/01/2021

ಸೋಮವಾರಪೇಟೆ ಜ. 28 : ಕನ್ನಡ ಕಾಯಕ ವರ್ಷಾಚರಣೆ ಅಂಗವಾಗಿ ಶುದ್ಧಕನ್ನಡ ನಾಮಫಲಕ ಹಾಗೂ ಆಡಳಿತದಲ್ಲಿ ಕನ್ನಡ ಅನುಷ್ಠಾನ ಆಂದೋಲನದ ಹಕ್ಕೊತ್ತಾಯ ಮನವಿ ಪತ್ರವನ್ನು ಪಟ್ಟಣ ಪಂಚಾಯ್ತಿಗೆ ನೀಡಲಾಯಿತು.
ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್ ಪಟ್ಟಣ ಪಂಚಾಯ್ತಿ ಅದ್ಯೆಕ್ಷೆ ನಳಿನಿಗಣೇಶ್ ಹಾಗೂ ಮುಖ್ಯಾಧಿಕಾರಿ ನಾಚಪ್ಪನವರಿಗೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನ ಗೊಳಿಸಲು ಕನ್ನಡ ಅಭಿವೃದ್ಫಿ ಪ್ರಾಧಿಕಾರದ ಮೂಲಕ ಕನ್ನಡ ಕಾಯಕ ವರ್ಷವನ್ನಾಗಿ ಘೋಷಿಸಿದೆ.ಆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಖಚೇರಿಗಳಲ್ಲಿ ಕನ್ನಡ ಸಮರ್ಪಕವಾಗಿ ಜಾರಿಗೆ ಬರಬೇಕು ಹಾಗೂ ವ್ಯಾವಹಾರಿಕ ಸ್ಥಳಗಳಾದ ಅಂಗಡಿಮುಂಗಟ್ಟುಗಳು,ಹೋಟೆಲ್,ಮಾಲ್ ಗಳು,ರಾಜ್ಯಸರ್ಕಾರದ ಖಚೇರಿಗಳ ನಾಮಪಲಕಗಳು ಕಡ್ಡಾಯವಾಗಿ ಕನ್ನಡವೇ ಪ್ರದಾನವಾಗಿರಬೇಕು.ಕೇಂದ್ರ ಸರ್ಕಾರದ ಖಚೇರಿಗಳ ನಾಮಪಲಕಗಳು ತ್ರಿಭಾಷಾ ನೀತಿಯಂತಿರಬೇಕೆಂದು ಸೂಚಿಸಲಾಗಿದ್ದು ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಉಪಾದ್ಯೆಕ್ಷ ಸಂಜೀವ,ಸ್ಥಾಯಿಸಮಿತಿ ಅದ್ಯೆಕ್ಷೆ ಜಯಂತಿ ಶಿವಕುಮಾರ್,ಸದಸ್ಯರಾದ ಚಂದ್ರು,ಶರತ್,ಆರೋಗ್ಯ ನಿರೀಕ್ಷಕ ಉದಯಕುಮಾರ್ ಇದ್ದರು.