ಸಿದ್ಧಗಂಗಾ ಸಂಸ್ಥೆಯ ಜೈವಿಕ ವನದಲ್ಲಿ ಬೆಂಕಿ : ಗಿಡಮೂಲಿಕೆಗಳು ಅಗ್ನಿಗಾಹುತಿ

29/01/2021

ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ ಜೈವಿಕ ವನವು ಕಿಡಿಗೇಡಿಗಳ ಕೃತ್ಯಕ್ಕೆ ಹೊತ್ತಿ ಉರಿದಿದೆ.

ತುಮಕೂರು ತಾಲೂಕು ಬಸ್ತಿ ಬೆಟ್ಟದ ಬಳಿ ಇರುವ ಗಿಡಮೂಲಿಕೆ ಬೆಳೆಯುತ್ತಿದ್ದ ಜೈವಿಕ ವನಕ್ಕೆ ಬೆಂಕಿ ಬಿದ್ದಿದೆ. ಈ ವನ ಸಿದ್ದಗಂಗಾ ಸಂಸ್ಥೆಗೆ ಸೇರಿದ್ದಾಗಿದೆ.

ಇಲ್ಲಿ ಹಲವು ರೋಗಗಳಿಗೆ ರಾಮಬಾಣವಾಗಿರುವ ಗಿಡಮೂಲಿಕೆಗಳನ್ನು ಬೆಳೆಸಲಾಗುತ್ತಿದ್ದು, ಈ ವನಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.