ಸೋಮವಾರಪೇಟೆ ಪ.ಪಂ. ಸಭೆ : ಸಂಕಷ್ಟಕ್ಕೆ ಒಳಗಾಗಿರುವ ವರ್ತಕರಿಗೆ ಮಾನವೀಯ ದೃಷ್ಠಿಯಿಂದ ಪ.ಪಂ ಸಹಕಾರಿಯಾಗಲಿ

January 29, 2021

ಸೋಮವಾರಪೇಟೆ:-ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ವಾರ್ಷಿಕ ಟೆಂಡರ್ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ಮಾನವೀಯ ನೆಲಗಟ್ಟಿನಲ್ಲಿ ಸಹಾಯ ಮಾಡಬೇಕೆಂದು ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರು ತಿಳಿಸಿದರು.
ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯು ಪಂಚಾಯ್ತಿ ಸಭಾಂಗಣದಲ್ಲಿ ಅದ್ಯೆಕ್ಷೆ ನಳಿನಿ ಗಣೇಶ್ ಅದ್ಯೆಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ಟೆಂಡರ್ ಮೂಲಕ ಕುರಿ,ಕೋಳಿ,ಹಸಿಮೀನು,ಸಂತೆಸುಂಕ ವಹಿವಾಟು ನಡೆಸುತ್ತಿರುವ ವರ್ತಕರು ಕೋರೋನದಿಂದಾಗಿ ಎಂಟು ತಿಂಗಳು ಸಂತೆ ಮಾರುಕಟ್ಟೆ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ ಎಂಬ ವಿಷಯ ಗಂಭೀರ ಚರ್ಚೆಗೆ ಕಾರಣವಾಯಿತು. ಇವರೀಗೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಮಾಡಬೇಕು ಅವರು ಈಗಾಗಲೇ ಹಣ ಕಟ್ಟಿರುವುದರಿಂದ ಅವರ ಟೆಂಡರ್ ಅವಧಿಯನ್ನು ಮುಂದುವರೆಸಬೇಕೆಂದು ಎಲ್ಲಾ ಸದಸ್ಯರು ಮುಖ್ಯಾಧಿಕಾರಿ ಗಳನ್ನು ಒತ್ತಾಯಿಸಿದರು ಅಲ್ಲದೆ ಈ ಬಗ್ಗೆ ಶಾಸಕರು ಸಹ ಪತ್ರಬರೆದಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ನಾಚಪ್ಪ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲಾ ಅಲ್ಲದೆ ಆಡಲಿತಮಂಡಲಿ ನಿರ್ದಾರ ಕೈಗೊಳ್ಳಲು ಸಾಧ್ಯವಿಲ್ಲ. ವಿಚಾರವನ್ನು ಜಿಲ್ಲಾದಿಕಾರಿಗಳ ಗಮನ ಸೆಳೆದು ಸರ್ಕಾರದ ಅನುಮತಿ ಪಡೆಯಬೇಕಾಗುತದೆ ಎಂದರು.
ಸ್ಥಳೀಯ ಸಮಸ್ಯೆಗಳ ಬಗ್ಗೆ ನಾವು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಾಣಬೇಕು ಆದ್ದರಿಂದ ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾದಿಕಾರಿಗಳಿಗೆ ಕಳುಸುವಂತೆ ತೀರ್ಮಾನಿಸಲಾಯಿತು.
ಪಟ್ಟಣದ ವರ್ಕ್ ಶಾಪ್ಗಳಿರುವ ಪ್ರದೇಶದಲ್ಲಿ ಅನದಿಕೃತ ಕಟ್ಟಡ ತಲೆಎತ್ತಿದ್ದು ಅದನ್ನು ತೆರವು ಗೊಳಿಸುವಂತೆ ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಆದರೆ ಇವರೇಗೆ ತೆರವುಗೊಳಿಸಿಲ್ಲಾ ಎಂಬ ವಿಷಯ ಬಿಸಿ,ಬಿಸಿ ಚರ್ಚೆಗೆ ಬಂದಿತು. ಅದು ಅನಧಿಕೃತ ಕಟ್ಟದವಲ್ಲಾ ನವೀಕರಣ ಗೊಳಿಸಲಾಗಿದೆ ಅಷ್ಟೇ ಆದ್ದರಿಂದ ತೆರವು ಗೊಳಿಸಬೇಕಾಗಿಲ್ಲಾ.ಹಾಗೆ ತೆರವು ಗೊಳಿಸಬೇಕೆಂದಿದ್ದರೆ ಈ ಹಿಂದೆಯೇ ಅಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವು ಗೊಳಿಸುವಂತೆ ತೀರ್ಮಾನಿಸ ಲಾಗಿದೆ ಅದೇ ಇನ್ನೂ ಕಾರ್ಯಗತವಾಗಿಲ್ಲಾ ಎಂದು ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಉಳಿದಂತೆ ನೀರು,ವಿದ್ಯುತ್,ರಸ್ತೆ ಮುಂತಾದ ವಿಚಾರಗಳಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಉಪಾದ್ಯೆಕ್ಷ ಸಂಜೀವ,ಸದಸ್ಯರುಗಳಾದ ಜಯಂತಿಶಿವಕುಮಾರ್,ಶೀಲಾಡಿಸೋಜ,ವೆಂಕಟೇಶ್,
ಚಂದ್ರು,ಮಹೇಶ್,ಜೀವನ್,ಉದಯಶಂಕರ್,ನಾಗರತ್ನ,ಶುಭಕರ,ಎಸ್.ಮಹೇಶ್,ಶರತ್,ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಅಭಿಯಂತರ ಹೇಮಂತ್,ಆರೋಗ್ಯನಿರೀಕ್ಷಕ ಉದಯಕುಮಾರ್,ವಿಷಯ ಸಂಗ್ರಾಹಕಿ ರೂಪಾ, ಪ್ರಥಮದರ್ಜೆ ಸಹಾಯಕ ರಫೀಕ್,ಅಕೌನ್ಟೆಂಟ್ ಭಾವನಾ ಉಪಸ್ಥಿತರಿದ್ದರು.

error: Content is protected !!