ತಂತ್ರಜ್ಞಾನ ಮತ್ತು ತಂತ್ರಾಂಶಗಳ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಿ : ಟಿ.ಎಸ್.ನಾಗಾಭರಣ ಸಲಹೆ

January 29, 2021

ಮಡಿಕೇರಿ ಜ.29 : ಆಧುನೀಕತೆಯ ನಡುವೆ ಭವಿಷ್ಯದ ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆ ಬಗ್ಗೆ ಆಳವಾದ ಚಿಂತನೆ ನಡೆಯಬೇಕಾಗಿರುವುದು ಅನಿವಾರ್ಯವಾಗಿದ್ದು, ಇಂದಿನ ಅಗತ್ಯತೆಗಳಾದ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಕರಗತಗೊಳಿಸಿಕೊಳ್ಳುವ ಮೂಲಕ ‘ಕನ್ನಡತನ’ವನ್ನು ಹೆಮ್ಮರವಾಗಿ ಬೆಳೆಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ‘ಸುವರ್ಣ ಸಂಭ್ರಮ’ ಮತ್ತು 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಕಾವೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ತಂತ್ರಾಂಶಗಳು ಇಂದಿನ ಅಗತ್ಯವಾಗಿದೆ ಎಂದರು. ಕನ್ನಡದ ಬಳಕೆಗೆ ಪೂರಕವಾದ ಆ್ಯಪ್‍ಗಳನ್ನು, ತಂತ್ರಾಂಶಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿರುವುದಲ್ಲದೆ, ಇದೇ ಪ್ರಮುಖ ಸವಾಲೂ ಆಗಿದೆ. ಅದನ್ನು ಸಾಧಿಸಿಸುವುದೇ ನಮ್ಮ ಸಾಧನೆಯಾಗಬಲ್ಲುದೆಂದು ಅಭಿಪ್ರಾಯಿಸಿದರು.
ಕನ್ನಡದ ಭಾಷೆ, ಸಂಸ್ಕøತಿ ಎಲ್ಲವೂ ಅತ್ಯಪÀÇರ್ವವಾದುದು. ಈ ಹಿನ್ನೆಲೆ ‘ಮೆಕಾಲೆ ಸಂಸ್ಕøತಿಯ’ ಭಾಷೆಯೆಡೆಗಿನ ಕೀಳರಿಮೆಯನ್ನು ತೊರೆದು ಹೊರ ಬರುವ ಮೂಲಕ, ಹೆಮ್ಮೆಯ ಹಿರಿಮೆಯ ಕನ್ನಡದ ಬೆಳವಣಿಗೆಗೆ ಪ್ರತಿಯೊಬ್ಬರು ಮುಂದಾಗಬೇಕು. ಭಾಷೆಯನ್ನು ಬೆಳೆಸಿದರೆ ಅದು ನಿಮ್ಮನ್ನು ಬೆಳೆಸುತ್ತದೆಂದು ಮುಕ್ತವಾಗಿ ನುಡಿದ ನಾಗಾಭರಣ, ನಿರಂತರ ಕನ್ನಡ ಕಲಿಕೆ ಮತ್ತು ನಿರಂತರ ಕನ್ನಡ ಬಳಕೆಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳುವಂತೆ ಕರೆ ನೀಡಿದರು.
ಸಾರ್ವಭೌಮ ಭಾಷೆ ಕನ್ನಡ- ಕನ್ನಡದ ನೆಲೆ ಕರ್ನಾಟಕ ವಿವಿಧ ಭಾಷಾ ಸಂಸ್ಕøತಿಯೊಂದಿಗೆ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡಿದ್ದು, ಬಹುಭಾಷಾಮಯಿಯಾದ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆ ‘ಕನ್ನಡ’ವೇ ಆಗಿದೆಯೆಂದು ದೃಢವಾಗಿ ನುಡಿದರು.
ಪ್ರಸ್ತುತ ಆಂಗ್ಲ ಭಾಷಾ ವ್ಯಾಮೋಹದ ಪರಿಣಾಮವಾಗಿ ‘ಕನ್ನಡ’ ತನವನ್ನು ಕಾಯ್ದುಕೊಳ್ಳುವ ಕೆಲಸಕ್ಕಿಂದು ನಾವು ಹೊರಟಿದ್ದೇವೆ. ಇಂಗ್ಲಿಷ್ ಪ್ರಭಾವಲಯದಿಂದ ಹೊರ ಬಂದು ಕನ್ನಡವನ್ನು ಕಟ್ಟುವ ಕೆಲಸಕ್ಕೆ ಮುಂದಾಗುವ ಅಗತ್ಯವಿದೆ. ಈ ನೆಲೆಯಲ್ಲೆ ರಾಜ್ಯದ ಮುಖ್ಯಮಂತ್ರಿಗಳು ಪ್ರಸಕ್ತ ವರ್ಷವನ್ನು ‘ಕನ್ನಡ ಕಾಯಕ ವರ್ಷ’ವೆಂದು ಘೋಷಿಸಿದ್ದಾರೆ. ಕಾಯಕವೆಂದರೆ ಅದು ಕೇವಲ ಕೆಲಸವೆಂದು ಮಾತ್ರವಲ್ಲ, ಬದಲಾಗಿ ಕನ್ನಡದ ಚಟುವಟಿಕೆಗಳ ಮೂಲಕ ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸವೇ ಆಗಿದೆಯೆಂದು ವಿಶ್ಲೇಷಿಸಿದರು.
ಪಾಶ್ಚಿಮಾತ್ಯ ಸಂಸ್ಕøತಿಯೆಂದರೆ ಅದು ಆ ದಿನದ ಬದುಕನ್ನು ಕಾಣುವ, ಕ್ಷಣಿಕ ಸುಖದ ಪಥವನ್ನು ಹಿಡಿದ ಸಂಸ್ಕøತಿಯಾಗಿದೆಯಾದರೆ, ಕನ್ನಡ ಸಂಸ್ಕøತಿ ಎನ್ನುವುದು ಪ್ರತಿಯೊಬ್ಬರನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ‘ವಿಶ್ವ ಮಾನವ ತತ್ತ್ವ’ವನ್ನು ಒಳಗೊಂಡ ಸಂಸ್ಕøತಿಯಾಗಿದೆ. ಇಂತಹ ವಿಶಾಲವಾದ ಚಿಂತನೆಯನ್ನು ಸಾವಿರ ವರ್ಷಗಳ ಹಿಂದಿನ ಕವಿರಾಜಮಾರ್ಗದಿಂದ ಹಿಡಿದು, ಬಸವಣ್ಣ, ಕನಕದಾಸ , ಕುವೆಂಪು ಅವರು ಜಾಗೃತವಾಗಿ ಕಟ್ಟಿಕೊಟ್ಟಿರುವುದಾಗಿ ಹೆಮ್ಮೆಯಿಂದ ನುಡಿದರು.
ಹುತ್ತರಿ ಹಾಡಿನ ಮೂಲಕ ಕೊಡಗಿನ ಹಿರಿಮೆ ಗರಿಮೆಯನ್ನು ಕಟ್ಟಿಕೊಟ್ಟಿರುವ ಪಂಜೆ ಮಂಗೇಶರಾಯರು, ಜಿ.ಪಿ.ರಾಜರತ್ನಂ ಮೊದಲಾದ ಹಿರಿಯ ಕವಿಗಳನ್ನು ಉಲ್ಲೇಖಿಸಿದ ನಾಗಾಭರಣ ಅವರು, ಕವಿ, ಕಾವ್ಯ ಪರಂಪರೆಯನ್ನು ನೆನಪಿಸುವ ಗಳಿಗೆಗಳೇ ಇಂತಹ ಸಾಹಿತ್ಯ ಸಮ್ಮೇಳನಗಳೆಂದು ವಿಶ್ಲೇಷಿಸಿದರು.
ಕವನಗಳನ್ನು ಸಿನಿಮಾಗಿಸುವ ಆಸೆ- ‘ಮಡಿಕೇರಿ ಮೇಲ್ ಮಂಜು..’ ಜಿ.ಪಿ.ರಾಜರತ್ನ ಅವರ ಕವನ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ತಿಳಿಸಿದ ನಾಗಾಭರಣ ಅವರು, ರಾಜರತ್ನಂ ಅವರ ಕವನಗಳನ್ನೇ ಆಧರಿಸಿ ಸಿನಿಮಾ ಮಾಡುವ ಆಸೆಯನ್ನು ಇದೇ ಸಂದರ್ಭ ಹೊರಗೆಡಹಿದರು.
ಸಭಾಂಗಣ ಉದ್ಘಾಟನೆ- ಸಮಾರಂಭಕ್ಕೂ ಮುನ್ನ ಸಿ.ಎಸ್. ವೆಂಕಪ್ಪಯ್ಯ ಸಭಾಂಗಣವನ್ನು ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉದ್ಘಾಟಿಸಿದರು.ರಾವ್ ಬಹದ್ದೂರು ಎಂ. ಮುತ್ತಣ್ಣ ವೇದಿಕೆಯನ್ನು ಚಂದ್ರಶೇಖರ ಮಲ್ಲೋರಹಟ್ಟಿ ಉದ್ಘಾಟಿಸಿದರು.
ಸಮ್ಮೇಳನಾಧ್ಯಕ್ಷೆ ಗೀತಾ ಮಂದಣ್ಣ ಉಪಸ್ಥಿತಿಯಲ್ಲಿ ಸಮಾರಂಭದ ಸಾನಿಧ್ಯವನ್ನು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ನಾಗೇಶ್ ಕಾಲೂರು, ಮಡಿಕೇರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್, ನಿಕಟಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷರಾದ ಟಿ.ಪಿ. ರಮೇಶ್, ತಾಲ್ಲೂಕು ಅಧ್ಯಕ್ಷರುಗಳಾದ ಕುಡೆಕಲ್ ಸಂತೋಷ್, ಎಂ.ಡಿ. ರಂಗಸ್ವಾಮಿ, ಮುಲ್ಲೇಂಗಡ ಮಧೋಶ್ ಪೂವಯ್ಯ, ಡಾ. ಚಂದ್ರಶೇಖರ್, ಹೆಚ್.ಜೆ. ಜವರಪ್ಪ, ಕಸಾಪ ವಿವಿಧ ಘಟಕಗಳ ಅಧ್ಯಕ್ಷರುಗಳು , ಗಣ್ಯರು ಹಾಜರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರೆ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೆÉೀಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಹರಿ ಕಲಾ ತಂಡದಿಂದ ನಾಡಗೀತೆ ಮತ್ತು ಮುತ್ತಿನಹಾರ ಕಲಾ ತಂಡದಿಂದ ಸುಶ್ರಾವ್ಯವಾದ ರೈತ ಗೀತೆ ಮೊಳಗಿತು.
ಅಕ್ಷರ ದೇಗುಲ ಪುಸ್ತಕ ಪ್ರದರ್ಶನ- ಜಿಲ್ಲಾ ಸಮ್ಮೇಳನ ಪ್ರಯುಕ್ತ ಆಯೋಜಿತ ‘ಅಕ್ಷರ ದೇಗುಲ’ ಪುಸ್ತಕ , ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಮಡಿಕೆÉೀರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಉದ್ಘಾಟಿಸಿದರು.
ಸರಳ ಮೆರವಣಿಗೆ- ಸಮ್ಮೇಳವಾಧ್ಯಕ್ಷರಾದ ಗೀತಾ ಮಂದಣ್ಣ ಅವರ ಮೆರವಣಿಗೆ ನಗರದ ಕಾವೇರಿ ಕಲಾ ಕ್ಷೇತ್ರದಿಂದ ಕಾವೇರಿ ಹಾಲ್‍ವರೆಗೆ ಸರಳವಾಗಿ ನಡೆಯಿತು. ತೆರೆದ ವಾಹನದಲ್ಲಿ ಗೀತಾ ಮಂದಣ್ಣ ಅವರನ್ನು ಪೂರ್ಣ ಕುಂಭದೊಂದಿಗೆ ಮೆರವಣಿಗೆಯ ಮೂಲಕ ಕರೆ ತರಲಾಯಿತು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು ಅವರು ಧ್ವಜವನ್ನು ಹಸ್ತಾಂತರಿಸುವ ಮೂಲಕ 15ನೇ ಸಮ್ಮೇಳನಾಧ್ಯಕ್ಷೆ ಗೀತಾ ಮಂದಣ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರು ಜಿಲ್ಲೆಯಲ್ಲಿ ಕಸಾಪ ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕಿದರು. ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸ್ವಾಮೀಜಿ ಹಾಗೂ ಟಿ.ಎಸ್.ನಾಗಾಭರಣ ಅವರು ಕೊಡಗಿನ ವಿವಿಧ ಲೇಖಕರ ನೂತನ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

error: Content is protected !!