ಕೋಪಟ್ಟಿಯಲ್ಲಿ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾವಳಿ : ಬಿ. ಬಾಡಗ ತಂಡ ಪ್ರಥಮ

January 29, 2021

ಮಡಿಕೇರಿ ಜ.29 : ಕೋಪಟ್ಟಿಯ ಶ್ರೀ ಮಹಾವಿಷ್ಣು ಯುವಕ ಸಂಘದ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಪ್ರಥಮ ವರ್ಷದ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸಲಾಯಿತು.
ಕುಂದಚೇರಿ ಗ್ರಾ.ಪಂ. ಸದಸ್ಯ ಪೊಡನೊಳನ ದಿನೇಶ್ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ ಸದಸ್ಯ ಹರೀಶ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು, ಬಿ. ಬಾಡಗ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ದ್ವೀತಿಯ ಸ್ಥಾನವನ್ನು ಚೇರಂಬಾಣೆ ತಂಡ ತನ್ನದಾಗಿಸಿಕೊಂಡಿತು.
ಸಂಘದ ಅಧ್ಯಕ್ಷ ಕೀಜನ ಡಲ್ಲೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಚೆನ್ನಪಂಡ ಸವಿತ, ಬೇಬಿ ಪೊನ್ನಪ್ಪ, ಅಪ್ಪರಂಡ ರತಿ ಬಿದ್ದಪ್ಪ, ಯುವಕ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.
ತೀರ್ಪುಗಾರರಾಗಿ ರದೀಶ್ ಜಾನ್ಸನ್ ಕಾರ್ಯನಿರ್ವಹಿಸಿದರು. ಎ.ಎಸ್. ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

error: Content is protected !!