ಕೊಡಗು ಪತ್ರಕರ್ತರ ವೇದಿಕೆಯಿಂದ ನೂತನ ಜಿಲ್ಲಾಧಿಕಾರಿಗೆ ಅಭಿನಂದನೆ

January 29, 2021

ಮಡಿಕೇರಿ ಜ.29 : ಈ ಹಿಂದೆ ಕೊಡಗು ಜಿಲ್ಲಾ ಪಂಚಾಯತಿಯಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಚಾರುಲತಾ ಸೋಮಲ್ ಪ್ರಸ್ತುತ ಕೊಡಗು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರನ್ನು ಕೊಡಗು ಪತ್ರಕರ್ತರ ವೇದಿಕೆಯ ಆಡಳಿತ ಮಂಡಳಿ ಇಂದು ಭೇಟಿ ನೀಡಿ ಅವರಿಗೆ ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿ ಅಭಿನಂದಿಸಲಾಯಿತು.

ಚಾರುಲತ ಸೋಮಲ್ ಅವರು‌ ಜಿ.ಪಂ. ಸಿ ಇ‌ ಓ ಆಗಿದ್ದ ಸಂದರ್ಭದಲ್ಲಿ ಕೊಡಗು ಪತ್ರಕರ್ತರ ವೇದಿಕೆಯು ಜಿ.ಪಂ ಜನಪತ್ರಿನಿಧಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಗಾರದಲ್ಲಿ ಚಾರುಲತಾ ಸೋಮಲ್ ಅವರು ಕಾರ್ಯಕ್ರಮದ ಸಂಪೂರ್ಣ ‌ಯಶಸ್ವಿಗೆ ಸಹಕರಿಸಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾಗಿದ್ದರು ಎನ್ನುವುದನ್ನು ಈ ಸಂದರ್ಭ ಸ್ಮರಿಸಿಕೊಳ್ಳಲಾಯಿತು‌.
ರಾಷ್ಟ್ರಪತಿಗಳು ಕೊಡಗಿಗೆ ಆಗಮಿಸುತ್ತಿರುವ ಹಿನ್ನೆಲೆ ತುರ್ತುಕಾರ್ಯದಲ್ಲಿದ್ದ ಕಾರಣ ಫೆ. 6 ನಂತರ ರಾಷ್ಟ್ರಪತಿಗಳ ಕಾರ್ಯಕ್ರಮದ ಬಳಿಕ ಮತ್ತೊಮ್ಮೆ ಭೇಟಿಯಾಗಿ ಕೊಡಗಿನ ಅಭಿವೃದ್ಧಿ ಹಾಗು ಸಮಸ್ಯೆಗಳ‌ ಕುರಿತು ಚರ್ಚಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭ ವೇದಿಕೆಯ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೂವಳ್ಳಿ, ರಂಜಿತ್ ಕವಲಪಾರ, ಚಂದನ್ ನಂದರಬೆಟ್ಟು ಹಾಗು ಚಪ್ಪೇರ ಯತೀನ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!