ಪಕ್ಷಿಗಳ ಲೋಕ ಗುಡವಿ ಪಕ್ಷಿಧಾಮ

January 30, 2021

(ಶಿವಮೊಗ್ಗ ಜಿಲ್ಲೆ) ಶಿವಮೊಗ್ಗದಿಂದ ಸಾಗರ ಸೊರಬ ಮಾರ್ಗವಾಗಿ 112ಕಿಮೀ ದೂರದಲ್ಲಿದೆ. 1989 ಜುಲೈನಲ್ಲಿ ಸ್ಥಾಪಿತವಾಯಿತು. 30 ಹೆಕ್ಟೇರ್ ವಿಸ್ತೀರ್ಣವುಳ್ಳ ಜಲಾಶಯ ಮತ್ತು ಅದಕ್ಕೆ ಸೇರಿಕೊಂಡಂತಿರುವ ದಟ್ಟ ಆದ್ರ್ರಪರ್ಣಪಾತಿ ಅರಣ್ಯವನ್ನು ಒಳಗೊಂಡ ತಾಣ. ವಿಸ್ತೀರ್ಣ 0.74ಚಕಿಮೀ. ತೊರೆಮತ್ತಿ, ತಾರೆ, ಅಳಲೆ, ನಂದಿ, ಬೀಟೆ, ಅರಿಷಿಣತೇಗ, ಜಂಬೆ, ಬಗನಿ, ಆಲ, ಅರಳಿ, ಮುತ್ತುಗ, ಶ್ರೀಗಂಧ, ಇಪ್ಪೆ ಮರಗಳು ಇಲ್ಲಿನ ಮುಖ್ಯ ಸಸ್ಯ ಜಾತಿಗಳು. 191 ಬಗೆಯ ಹಕ್ಕಿಗಳು ಇಲ್ಲಿ ಕಾಣದೊರೆಯುತ್ತವೆ. ಇವುಗಳ ಪೈಕಿ 63 ನೀರಹಕ್ಕಿಗಳು. ಹಲವು ಬಗೆಯ ಬೆಳ್ಳಕ್ಕಿ, ನೀರುಕಾಗೆ ಜಾತಿಗಳು, ಬಕಗಳು, ಕೊಕ್ಕರೆಗಳು, ಬಿಳಿಬೂಸಾ, ಕಪ್ಪುಬೂಸಾ, ನಾಮದಕೋಳಿ, ಮೀಂಚುಳ್ಳಿ ಬಗೆಗಳು, ಮದಗದ ಕೋಳಿ, ಬಾತುಗಳು ಹೇರಳವಾಗಿವೆ.

error: Content is protected !!