ಮನೆಯಲ್ಲೇ ಮಾಡಿಕೊಳ್ಳಬಹುದಾದ ಒಂದಷ್ಟು ಮನೆ ಮದ್ದು

January 30, 2021

ಕೊತ್ತಂಬರಿಸೊಪ್ಪಿನ ರಸವನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಬಾಯಿ ಕಹಿಯ ಸಮಸ್ಯೆ ದೂರವಾಗುತ್ತದೆ.

ಕಾಲಿಗೆ ಊತ ಬಂದಿದ್ದರೆ ಕೊತ್ತಂಬರಿಕಾಳನ್ನು ನೀರಿನಲ್ಲಿ ಅರೆದು ಲೇಪಿಸಿಕೊಳ್ಳುವುದರಿಂದ ಶಮನ ಸಾಧ್ಯ.

ಕ್ರಿಮಿಕೀಟ ಕಚ್ಚಿದಾಗ ಬೆಳ್ಳುಳ್ಳಿಯನ್ನು ಉಪ್ಪಿನ ಜೊತೆ ಅರೆದು ಲೇಪಿಸಿಕೊಳ್ಳಬೇಕು.

ಲವಂಗವನ್ನು ಬಿಸಿ ಮಾಡಿ ಬಾಯಲ್ಲಿಟ್ಟುಕೊಂಡು ರಸವನ್ನು ಚಪ್ಪರಿಸುವುದರಿಂದ ಗಂಟಲುನೋವು ಕಡಿಮೆಯಾಗುತ್ತದೆ.

ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 2-3 ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ.

ಲವಂಗದ ಕಷಾಯ ಸೇವನೆಯಿಂದ ಜಂತುಹುಳುವಿನ ಸಮಸ್ಯೆಯನ್ನು ನಿವಾರಿಸಬಹುದು.

ಜ್ವರದಿಂದ ಬಳಲುವವರು ಅರ್ಧ ಚಮಚ ಜೀರಿಗೆ ಪುಡಿಯನ್ನು ಬೆಲ್ಲದೊಂದಿಗೆ ಬೆರೆಸಿ ತಿನ್ನುವುದರಿಂದ ದಾಹ ಕಡಿಮೆಯಾಗುತ್ತದೆ.

ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಿಸಬಹುದು.

ಪಪ್ಪಾಯಿ ಹಣ್ಣಿಗೆ ನಿಯಮಿತ ಸೇವನೆಯಿಂದ ಮೂಲವ್ಯಾಧಿಯ ಸಮಸ್ಯೆಯನ್ನು ತಡೆಗಟ್ಟಬಹುದು.

ಬಸಳೆಯ ದಂಟನ್ನು ಜಗಿದು ತಿನ್ನುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ.

ಒಂದೆಲಗ ಎಲೆಗಳ ಕಷಾಯದ ಸೇವನೆಯಿಂದ ತಲೆನೋವು ಕಡಿಮೆಯಾಗುತ್ತದೆ.

ಎಳ್ಳು ಎಣ್ಣೆಯನ್ನು ಲೇಪಿಸಿಕೊಳ್ಳುವುದರಿಂದ ಕೂದಲು ಕಾಂತಿಯುಕ್ತವೂ, ದಟ್ಟವೂ ಆಗುತ್ತದೆ.

ಅಶೋಕಹೂಗಳನ್ನು ಒಣಗಿಸಿ ಪುಡಿ ಮಾಡಿ ದಿನನಿತ್ಯ ಹಾಲಿನೊಂದಿಗೆ ಸೇವಿಸುತ್ತ ಬಂದಲ್ಲಿ ಹೊಟ್ಟೆನೋವು ಕಡಿಮೆಯಾಗುತ್ತದೆ.

ಕೂದಲಿಗೆ ಬೇವಿನ ಎಲೆಗಳ ಪೇಸ್ಟ್ ಲೇಪಿಸಿಕೊಂಡು ಅರ್ಧಗಂಟೆಯ ಬಳಿಕ ತೊಳೆದುಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಪಾರಿಜಾತ ಹೂವುಗಳಿಂದ ತಯಾರಿಸಿದ ಕಷಾಯದ ಸೇವನೆಯಿಂದ ಜ್ವರ ದೂರವಾಗುತ್ತದೆ.

ಕಾಳುಮೆಣಸು ಹಾಗೂ ಬೆಲ್ಲ ಸೇರಿಸಿ ತಯಾರಿಸಿದ ಕಷಾಯದ ಸೇವನೆಯಿಂದ ಗಂಟಲು ಕೆರೆತ ಕಡಿಮೆಯಾಗುತ್ತದೆ.

ಏಲ್ಲಕ್ಕಿಯನ್ನು ಬಾಯಲ್ಲಿಟ್ಟುಕೊಂಡು ರಸ ನುಂಗುವುದರಿಂದ ಒಣಕೆಮ್ಮು ಕಡಿಮೆಯಾಗುತ್ತದೆ.

ಕೊತ್ತಂಬರಿಸೊಪ್ಪಿನ ರಸವನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಬಾಯಿ ಕಹಿಯ ಸಮಸ್ಯೆ ದೂರವಾಗುತ್ತದೆ.

ಬಿಸಿನೀರಿಗೆ ನಿಂಬೆಹಣ್ಣಿನ ರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಗಂಟಲುನೋವು ಶಮನವಾಗುತ್ತದೆ.

ಬೆಂಡೆಗಿಡದ ಎಲೆಗಳನ್ನು ಅರೆದು ಹಚ್ಚಿದರೆ ಗಾಯಗಳು ಬೇಗ ಗುಣವಾಗುತ್ತವೆ.

ಹಾಗಲಕಾಯಿಯ ನಿಯತ ಬಳಕೆಯಿಂದ ದೃಷ್ಟಿಶಕ್ತಿ ಉತ್ತಮಗೊಳ್ಳುತ್ತದೆ.

ಇಪ್ಪತ್ತು ದಿನಗಳ ಕಾಲ ಪ್ರತಿದಿನ ಸ್ಟ್ರಾಬೆರಿ ಹಣ್ಣಿನ ರಸದಿಂದ ಹಲ್ಲುಜ್ಜುವುದರಿಂದ ಹಲ್ಲಿನ ಹೊಳಪು ಹೆಚ್ಚುತ್ತದೆ.

ಲಾವಂಚದ ಬೇರನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿದರೆ ಜಂತುಹುಳಗಳ ತೊಂದರೆ ಕಡಿಮೆಯಾಗುತ್ತದೆ.

ಕೀವಿಹಣ್ಣನ್ನು ನಿಯತವಾಗಿ ಸೇವಿಸುವುದರಿಂದ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ತಡೆಯಬಹುದು.

ಹಸಿ ಬೆಂಡೆಕಾಯಿಯ ಕ್ರಮಬದ್ಧ ಸೇವನೆಯು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ಬೆಳ್ಳುಳ್ಳಿ ಅರೆದ ಲೇಪನವನ್ನು ರಾತ್ರಿ ಅಲ್ಪಪ್ರಮಾಣದಲ್ಲಿ ಮೊಡಮೆಯ ಮೇಲೆ ತೆಳುವಾಗಿ ಹಚ್ಚಿ ಬೆಳಗ್ಗೆ ತೊಳೆದುಕೊಂಡರೆ ಮೊಡವೆ ಇಲ್ಲವಾಗುತ್ತದೆ.

ವೀಳ್ಯದೆಲೆ ಹಾಗೂ ಅಡಕೆಯನ್ನು ಜಜ್ಜಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಒಣಕೆಮ್ಮು ಕಡಿಮೆಯಾಗುತ್ತದೆ.

ಕ್ಷಯ ರೋಗಿಗಳು ನಿಯಮಿತವಾಗಿ ಒಣದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತಸಂಚಾರ ಸರಾಗವಾಗಿ ಆಗುತ್ತದೆ.

ದಾಳಿಂಬೆಸಿಪೆಯ ಪುಡಿಯನ್ನು ನಿಯಮಿತವಾಗಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಅನ್ನದ ಜೊತೆಗೆ ಕರಿಬೇವಿನ ಪುಡಿಯನ್ನು ತಿನ್ನುವುದರಿಂದ ಗ್ಯಾಸ್ ಟ್ರಬಲ್ ದೂರ ಮಾಡಬಹುದು.

error: Content is protected !!