ಕೊಯನಾಡಿನಲ್ಲಿ 15 ಅಡಿ ಉದ್ದದ ಹೆಬ್ಬಾವು ಸೆರೆ

30/01/2021

ಮಡಿಕೇರಿ ಜ.30 : ಸಂಪಾಜೆ ಸಮೀಪದ ಕೊಯನಾಡಿನ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗದÀ ತೋಟದಲ್ಲಿದ್ದ ಸುಮಾರು 15 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಉರಗ ಪ್ರೇಮಿ ಕಲ್ಲುಗುಂಡಿಯ ಶರತ್ ಕೀಲಾರು ಅವರು ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟರು.
ವಲಯ ಅರಣ್ಯಾಧಿಕಾರಿ ಮಧುಸೂದನ್, ನಾಗೇಂದ್ರ, ನಾಗರಾಜು ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಹಾವುಗಳು ಕಂಡು ಬಂದರೆ ಕೊಲ್ಲದೆ ತಮ್ಮ ಮೊ.ಸಂ : 96118 17838 ನ್ನು ಸಂಪರ್ಕಿಸುವಂತೆ ಶರತ್ ಮನವಿ ಮಾಡಿದ್ದಾರೆ.