ಕೊಡಗು ರಕ್ಷಣಾ ವೇದಿಕೆಯಿಂದ ಮಾದಾಪುರದಲ್ಲಿ ರಕ್ತದಾನ ಶಿಬಿರ

January 30, 2021

ಮಡಿಕೇರಿ ಜ.30 : ಕೊಡಗು ರಕ್ಷಣಾ ವೇದಿಕೆಯ ಮಾದಾಪುರ ಘಟಕ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ, ನಿರ್ದೇಶಕ ಸುಲೈಮಾನ್, ಮಾದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪೊನ್ನಪ್ಪ, ಮಾದಾಪುರ ಹೋಬಳಿಯ ಬಿ.ಜೆ.ಪಿ ಅಧ್ಯಕ್ಷ ಕೊಪ್ಪತಂಡ ಗಣೇಶ್ ಹಾಗೂ ಯಂಗ್ ಇಂಡಿಯನ್ಸ್ ಮಾದಾಪುರ ಹಾಗೂ ಕೊಡಗು ರಕ್ಷಣಾ ವೇದಿಕೆಯ ಕಾರ್ಯದರ್ಶಿ ನಾಗಂಡ ಭವಿನ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದವರಿಗೆ ತಂಪು ಪಾನೀಯ ಮತ್ತು ಸಿಹಿ ನೀಡಲಾಯಿತು.

error: Content is protected !!