ಪಾಡಿಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘದಿಂದ ರಾಮಮಂದಿರಕ್ಕೆ ರೂ.25 ಸಾವಿರ

30/01/2021

ಮಡಿಕೇರಿ ಜ.30 : ಪಾಡಿಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘದ ವತಿಯಿಂದ ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣಕ್ಕೆ 25 ಸಾವಿರ ರೂ.ಗಳನ್ನು ನೀಡಲಾಯಿತು.
ಸಂಘದ ಅಧ್ಯಕ್ಷ ಕಾಂಡಂಡ ಬಿ.ಜೋಯಪ್ಪ ಅವರು ಬಿಜೆಪಿ ಪ್ರಮುಖ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರಿಗೆ ಚೆಕ್ ನ್ನು ಹಸ್ತಾಂತರಿಸಿದರು. ಈ ಸಂದರ್ಭ ಉಪಾಧ್ಯಕ್ಷ ಪರದಂಡ ಡಾಲಿ, ಗೌರವ ಕಾರ್ಯದರ್ಶಿ ಬೊಳ್ಳರಂಡ ಲಲಿತಾ ನಂದಕುಮಾರ್, ಖಜಾಂಚಿ ನಂಬಡಮಂಡ ಸುಬ್ರಮಣಿ, ನಿರ್ದೇಶಕರುಗಳಾದ ಕಲಿಯಂಡ ಹಾರಿಮಂದಣ್ಣ, ಬಾಚಮಂಡ ಲವಚಿಣ್ಣಪ್ಪ, ಕೋಡಿಮಣಿಯಂಡ ಸುರೇಶ್, ಕಲಿಯಂಡ ಸುನಂದ ಹಾಗೂ ಉದಿಯಂಡ ಸುರ ನಾಣಯ್ಯ ಉಪಸ್ಥಿತರಿದ್ದರು.