ಕೊಡಗಿನಲ್ಲಿ ಕನ್ನಡ ಅನುಷ್ಠಾನಕ್ಕೆ ಕನ್ನಡ ಜಾಗೃತಿ ಸಮಿತಿ ಕಾರ್ಯನಿರ್ವಹಿಸಬೇಕು : ಸಾಹಿತಿ ಟಿ.ಎಸ್. ನಾಗಾಭರಣ

30/01/2021

ಮಡಿಕೇರಿ ಜ. 30 : ಕೊಡಗು ಜಿಲ್ಲೆಯಲ್ಲೂ ಕನ್ನಡ ಅನುಷ್ಠಾನ ಗೊಳಿಸುವಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಾಹಿತಿ ಟಿ.ಎಸ್. ನಾಗಾಭರಣ ಸೂಚಿಸಿದರು.
ಪ್ರಾಧಿಕಾರದ ಅಧ್ಯಕ್ಷರಾಗಿ ಕೊಡಗಿಗೆ ಮೊದಲ ಭೇಟಿ ನೀಡಿದ ನಾಗಾಭರಣ ಹೋಟಲ್ ಮಯೂರದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯಸರ್ಕಾರ 2020ರ ನವಂಬರ್ 1ರಿಂದ 2021ರ ಆಕ್ಟೊಬರ್ 31ರ ವರೆಗೆ ಕನ್ನಡ ಕಾಯಕ ವರ್ಷವನ್ನಾಗಿ ಘೋಷಿಸಿದೆ ಈಗಾಗಲೇ 3 ತಿಂಗಳು ಕಳೆದುಹೋಗಿದೆ ಉಳಿದ 9 ತಿಂಗಳಿನಲ್ಲಿ ಕನ್ನಡ ಅನುಷ್ಠಾನಗೊಳಿಸುವ ಕಾರ್ಯ ತ್ವರಿತ ಹಾಗೂ ಸಮರ್ಪಕವಾಗಿ ಆಗಬೇಕಾಗಿದೆ.
ಅದಕ್ಕಾಗಿ ಯೋಜನೆಗಳನ್ನು ರೂಪಿಸಬೇಕೆಂದರು. ಕೊಡಗು ಜಿಲ್ಲೆ ಚಿಕ್ಕದಾದರೂ ಸಾಕಷ್ಟು ಸಮಸ್ಯೆಗಳಿವೆ, ಕೇರಳಗಡಿಗೆ ಹೊಂದಿಕೊಂಡಂತಿರುವುದರಿಂದ ಗಡಿಭಾಗದ ಕನ್ನಡಿಗರ ಕುಂದು ಕೊರತೆಬಗ್ಗೆ ಗಮನಹರಿಸಬೇಕು,ಬ್ಯಾಂಕ್ ಗಳಲ್ಲಿ ಸರ್ಕಾರಿ ಖಚೇರಿಗಳಲ್ಲಿಬಳಸಬೇಕು,ನಾಮಪಾಲಕಗಳಲ್ಲಿ ಕನ್ನಡ ಪ್ರದಾನವಾಗಿರಬೇಕು ಈ ಬಗ್ಗೆ ಜಾಗೃತಿಸಮಿತಿ ಗಮನಹರಿಸಬೇಕು ಕಾರ್ಯತತ್ಪರಗಬೇಕು ಮತ್ತು ಈ ಬಗ್ಗೆ ಆಗಿಂದಾಗ್ಗೆ ಕೇಂದ್ರ ಖಚೇರಿಗೆ ವರದಿ ಸಲ್ಲಿಸಬೇಕೆಂದರು.
ಕೊಡಗಿನಲ್ಲಿ ಕನ್ನಡ ಅನುಷ್ಠಾನ ಗೊಳಿಸಲು ವಿವಿಧ ಸ್ಪರ್ಧೆಗಳು,ವಿಚಾರಘೋಷ್ಟಿಗಳು,ಜಾಥಾ,ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲು ಯೋಜನೆರೂಪಿಸಿ,ಕ್ರಿಯಾಯೋಜನೆ ರಚಿಸಿ ಕೇಂದ್ರ ಸಮಿತಿಯಿಂದ ಒಪ್ಪಿಗೆ ಪಡೆದು ಕಾರ್ಯಗತ ಗೊಳಿಸಬೇಕೆಂದರು.
ಈ ಸಂದರ್ಭ ಟಿ.ಎಸ್.ನಾಗಾಭರಣ ಅವರನ್ನು ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಜಾಗೃತಿ ಸಮಿತಿ ಸದಸ್ಯರುಗಳಾದ ಎಸ್.ಮಹೇಶ್,ಭಾರತಿರಮೇಶ್,ಕಾಜೂರುಸತೀಶ್,
ರಂಜಿತಕಾರ್ಯಪ್ಪ, ಈ.ರಾಜು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ದರ್ಶನಾ, ಸಿಬ್ಬಂದಿ ಮಣಜೂರು ಮಂಜುನಾಥ್ ಹಾಜರಿದ್ದರು.