ಕೊಡಗು ಸಾಹಿತ್ಯ ಸಮ್ಮೇಳನ ಸಮಾರೋಪ : ದ್ವಿಭಾಷಾ ಸೂತ್ರ ಜಾರಿಯಾಗಲಿ : ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ರಾಜಕುಮಾರ್ ಒತ್ತಾಯ

30/01/2021

ಮಡಿಕೇರಿ ಜ.30 : ಉತ್ತರ ಭಾರತಕ್ಕೆ ತ್ರಿಭಾಷಾ ಸೂತ್ರ, ದಕ್ಷಿಣಕ್ಕೆ ದ್ವಿಭಾಷಾ ಸೂತ್ರ ಜಾರಿಯಾಗಲಿ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಅವರು ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ. ಅಂತಹ ಪಟ್ಟವನ್ನು ಸಂವಿಧಾನ ಅದಕ್ಕೆ ಕೊಟ್ಟಿಲ್ಲ. ಸಂವಿಧಾನದ 8ನೇ ಅನುಸೂಚಿತ ಪಟ್ಟಿಯಾದ 22 ಭಾಷೆಗಳೂ ಈ ದೇಶದ ಭಾಷೆಗಳೇ ಆಗಿದೆ.
ಹಿಂದಿ ಭಾರತ ಸರ್ಕಾರದ ಆಡಳಿತ ಭಾಷೆ. ಕನ್ನಡ ಕರ್ನಾಟಕ ಸರ್ಕಾರದ ಆಡಳಿತ ಭಾμÉ. ಸಂವಿಧಾನದ 343ರಿಂದ 351ನೆಯ ಅನುಚ್ಛೇದದವರೆಗೆ ತಿದ್ದುಪಡಿ ಮಾಡಿ ಹಿಂದಿಯ ಪಾರಮ್ಯಕ್ಕೆ ಕಡಿವಾಣ ಹಾಕಬೇಕು. ಆಯಾ ರಾಜ್ಯದ ಅಧಿಕೃತ ಭಾμÉಯನ್ನು ಪ್ರೌಢಶಾಲಾ ಹಂತದವರೆಗೆ ಶಿಕ್ಷಣ ಮಾಧ್ಯಮವಾಗಿ ಕಡ್ಡಾಯ ಮಾಡದೆ ಇದ್ದರೆ ಗಂಡಾಂತರ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಕನ್ನಡದ ಬೆಳವಣಿಗೆಗೆ ಕಂಟಕವಾಗಿರುವ ತ್ರಿಭಾಷಾ ಸೂತ್ರವನ್ನು ರದ್ದುಪಡಿಸಿ ಕನ್ನಡ ಮತ್ತು ಇಂಗ್ಲೀಷ್ ಮಾತ್ರ ಇರುವ ದ್ವಿಭಾಷೆ ಸೂತ್ರ ಜಾರಿಗೊಳಿಸುವ ಧೈರ್ಯ ತೋರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
::: ಸನ್ಮಾನ :::
ಸಮ್ಮೇಳನಾಧ್ಯಕ್ಷರಾದ ಗೀತಾಮಂದಣ್ಣ ಸೇರಿದಂತೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ನಯನಾ ಕಶ್ಯಪ್ (ಸಾಹಿತ್ಯ ಕ್ಷೇತ್ರ), ಮಾಧ್ಯಮ ಸ್ಪಂದನ (ಸಮಾಜ ಸೇವೆ), ಪೂಂಗೋಡಿ ಚಂದ್ರಶೇಖರ್ ನಾಯಕ್ (ಯಕ್ಷಗಾನ ಕ್ಷೇತ್ರ), ರಾಮ್ ಗೌತಮ್ (ಚಿತ್ರಕಲೆ), ರತ್ನಾಕರ್(ಶಿಕ್ಷಣ), ಅನಿಲ್ ಹೆಚ್.ಟಿ.(ಮಾಧ್ಯಮ), ಪಟ್ಟೆಮನೆ ನವನೀತ (ಕ್ರೀಡೆ), ಹೊಸೂರು ಸತೀಶ್ ಕುಮಾರ್(ಸಹಕಾರ), ಕಾವೇರಿ ಕಲಾ ಪರಿಷತ್( ಕಲಾ ಸಂಸ್ಥೆ, ಕುಶಾಲನಗರ), ಮುತ್ತಪ್ಪ ಕೆ.ಯು. (ಜೀವ ರಕ್ಷಕ), ರಮೇಶ್ ನಾಣಚ್ಚಿ ಹಾಡಿ (ಬುಡಕಟ್ಟು ಜನಪದ) ಚಂದ್ರಕಲಾ (ಜಾನಪದ), ಮಂಜುನಾಥ್ ಕಣಿವೆ( ನಾಟಿ ವೈದ್ಯ), ಗನೇಶ್ ಚಿಕ್ಕಳುವಾರ(ರಂಗಭೂಮಿ), ಮಹೇಶ್ ದೇವರು (ರಕ್ಷಣೆ ಸೇವೆ), ಆರ್.ಕೆ. ಬಾಲಚಂದ್ರ (ಯುವ ಜನ ತರಬೇತಿ), ಡಾ. ಸೂರ್ಯಕುಮಾರ್ ಕೆ.ಬಿ. (ವೈದ್ಯಕೀಯ), ಡಾ. ಕಾಳಿಮಾಡ ಕೆ. ಶಿವಪ್ಪ( ಸಂಗೀತ), ಎಂ.ಟಿ. ಬೇಬಿ (ಕೃಷಿ), ತೂಕ್ ಬೊಳಕ್ ಸಾಹಿತ್ಯ ಅಕಾಡೆಮಿ (ಕ್ರೀಡೆ, ಸಾಹಿತ್ಯ ಸಾಂಸ್ಕøತಿಕ ಸಂಸ್ಥೆ), ಆಶಾ ಸತೀಶ್ (ರಂಗೋಲಿ ವಿನ್ಯಾಸಕರು), ಕೇಟೋಳಿರ ಫ್ಯಾನ್ಸಿ ಗಣಪತಿ (ಗುಡಿ ಕೈಗಾರಿಕೆ), ಜಿ.ಟಿ.ದಿವಾಕರ್ (ಹೈನುಗಾರಿಕೆ) , ರಾಮ ( ಪೌರ ಕಾರ್ಮಿಕರು, ಮಡಿಕೇರಿ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳಾಗಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ವಾಮೀಜಿಗಳು ಪಾಲ್ಗೊಂಡಿದ್ದರು. ಸಭಾಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ಲೋಕೇಶ್ ಸಾಗರ್ ವಹಿಸಿದ್ದರು.