ಸುಂಟಿಕೊಪ್ಪದ ಪಿಂಚಣಿ ಅದಾಲತ್‍ನಲ್ಲಿ 30 ಮಂದಿಗೆ ಸೌಲಭ್ಯ ವಿತರಣೆ

February 1, 2021

ಮಡಿಕೇರಿ ಫೆ. 1 : ಸುಂಟಿಕೊಪ್ಪ ಕಂದಾಯ ಇಲಾಖೆಯ ವತಿಯಿಂದ ಪಿಂಚಣಿ ಅದಾಲತ್ ಅಂಗವಾಗಿ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಗೋವಿಂದ ರಾಜ್‍ರವರು ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದರು.
ಸುಂಟಿಕೊಪ್ಪ ಪ್ರವಾಸಿ ಮಂದಿರದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಅಂಗವಿಕಲ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನದ ಒಟ್ಟು 30 ಮಂದಿ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವಿತರಿಸಿ ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಬಡ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಪಿಂಚಣಿ ಅದಾಲತ್ ನಡೆಸಲಾಗುತ್ತಿದೆ ಎಂದರು.
ಅಂಗವಿಕಲ ವೇತನವನ್ನು 4 ಫಲಾನುಭವಿಗಳಿಗೆ, 16 ಮಂದಿಗೆ ಸಂಧ್ಯಾ ಸುರಕ್ಷಾ ವೇತನ, 4 ಮಂದಿಗೆ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, 6 ಮಂದಿಗೆ ವಿಧವಾ ವೇತನದ ಆದೇಶ ಪತ್ರ ವಿತರಿಸಲಾಯಿತು.
ಈ ಸಂದರ್ಭ ನಾಡಕಛೇರಿಯ ಉಪತಹಶೀಲ್ದಾರ್ ಕೆ.ಶುಭ, ಕಂದಾಯ ಪರಿವೀಕ್ಷಕರಾದ ಹೆಚ್.ಕೆ.ಶಿವಪ್ಪ, ಗ್ರಾಮಲೆಕ್ಕಿಗರಾದ ರೂಪ, ನಸೀಮ, ದೀಪಿಕಾ, ಡಾಪ್ನ ಡಿಕ್ರ್ರೂಸ್, ಆಶಾ ಬ್ಯಾಡಗೌಡರ್, ನಾಗೇಂದ್ರ ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಹಾಜರಿದ್ದರು.

error: Content is protected !!