ಅಪಘಾತದಲ್ಲಿ ಮೃತಪಟ್ಟ ವಿ.ಕೆ. ದಾಮು ಕುಟುಂಬಕ್ಕೆ ಆರ್ಥಿಕ ನೆರವು

February 1, 2021

ಮಡಿಕೇರಿ ಫೆ. 1 : ಅಪಘಾತದಲ್ಲಿ ಮೃತಪಟ್ಟ ವಿ.ಕೆ. ದಾಮು ಎಂಬವರ ಕುಟುಂಬಕ್ಕೆ ಯುನೈಟೆಡ್ ಇಂಡಿಯಾ ಇನ್ಯುರೇನ್ಸ್ ಕಂಪೆನಿ ಮಡಿಕೇರಿ ಶಾಖಾ ವತಿಯಿಂದ ರೂ. 15 ಲಕ್ಷ ಪರಿಹಾರ ಮೊತ್ತವನ್ನು ಹಸ್ತಾಂತರಿಸಲಾಯಿತು.
ವಾಹನ ಚಾಲನೆ ಮಾಡುವ ಸಂದರ್ಭ ವಿ.ಕೆ. ದಾಮು ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಪದ್ಮ ಎಂಬವರಿಗೆ ಪರಿಹಾರ ಮಂಜೂರಾತಿಯ ಆದೇಶ ಪತ್ರವನ್ನು ಶಾಖೆಯ ಪ್ರಬಂಧಕ ಈಶ್ವರನಾಯಕ್ ಹಸ್ತಾಂತರಿಸಿದರು.
ಈ ಸಂದರ್ಭ ಆಡಳಿತಧಿಕಾರಿ ಕೆ.ಕೆ. ಅಯ್ಯಣ್ಣ, ಸಿಬ್ಬಂದಿವರ್ಗ, ಹಿರಿಯ ಪ್ರತಿನಿಧಿಗಳು ಹಾಜರಿದ್ದರು.

error: Content is protected !!