ರುಚಿ ನೋಡಿ : ಕೊಡಗಿನ ವಿಶೇಷ ಖಾದ್ಯ ಪಂದಿಕರಿ- ಕಡಂಬಿಟ್ಟು

February 1, 2021

ಪೋರ್ಕ್ ಕರಿ

ಬೇಕಾಗುವ ಸಾಮಗ್ರಿಗಳು : 1 ಕೆಜಿ ಹಂದಿ ಮಾಂಸ, 15 ಹಸಿಮೆಣಸಿನಕಾಯಿ, 2 ಇಂಚು ಶುಂಠಿ, 20 ಬಿಡಿಸಿದ ಬೆಳ್ಳುಳ್ಳಿ, ಸಂಬಾರ ಈರುಳ್ಳಿ, 9 ರಿಂದ 14, ಅಥವಾ ಸಣ್ಣ ಗಾತ್ರದ ಈರುಳ್ಳಿ, 4 ರಿಂದ 6, 3 ಟೇಬಲ್ ಚಮಚ ಜೀರಿಗೆ, 8 ಲವಂಗ, 3 ತುಂಡು ಚೆಕ್ಕೆ, 100 ಗ್ರಾಂ ಪೋರ್ಕ್ ಪುಡಿ( ಇದು ಅಂಗಡಿಗಳಲ್ಲಿ ಸಿಗುತ್ತದೆ), 1 ಚಮಚ ಅರಿಶಿನ ಪುಡಿ, 3 ಚಮಚ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 3 ರಿಂದ 5 ಚಮಚ ಕಾಚಂಮ್ ಪುಳಿ, ಕರಿಬೇವಿನ ಸೊಪ್ಪು ,ಕೊತ್ತಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ

ಮಾಡುವ ವಿಧಾನ : ಮೊದಲು ಮಾಂಸವನ್ನು ಚನ್ನಾಗಿ ನೀರಿನಲ್ಲಿ ತೊಳೆಯಿರಿ, ತೊಳೆಯುವಾಗ ಸಲ್ಪ ಉಪ್ಪು, ಅರಿಶಿನ ಹಾಕಿ ತೊಳೆದುಕೊಳ್ಳಿ, ಈಗ ಇದಕ್ಕೆ ,ಅರಿಶಿನ, ಉಪ್ಪು ,ಮೆಣಸಿನ ಪುಡಿ ಸೇರಿಸಿ, ಚನ್ನಾಗಿ ಕಲಿಸಿ, 15 ನಿಮಿಷಗಳ ಕಾಲ ಇಡಿ, ಅ ಸಮಯದಲ್ಲಿ ಈರುಳ್ಳಿಯನ್ನು ಹೆಚ್ಚಿಕೊಳ್ಳಿ, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ,ಕರಿ ಮೆಣಸು 10 ,ಜೀರಿಗೆ, ಲವಂಗ, ಚೆಕ್ಕೆ,
ಇದನ್ನು ತರಿ ತರಿ ಯಾಗಿ ರುಬ್ಬಿಕೊಳ್ಳಿ, ಈ ನೆನೆಸಿದ ಮಾಂಸವನ್ನು ಬೇಯಲು ಬಿಡಿ,೧೫ ನಿಮಿಷಗಳ ನಂತರ, ರುಬ್ಬಿದ ಮಸಾಲೆ ಪದಾರ್ಥಗಳನ್ನು ಸೇರಿಸಿ, ಸಲ್ಪ ನೀರು, ಹಾಕಿ ಬೇಯಿಸಿ,ಬೆಂದ ನಂತರ, ಪೋರ್ಕ್ ಮಸಾಲೆ ಸೇರಿಸಿ ಚನ್ನಾಗಿ ಚಮಚದಿಂದ ಕೈ ಅಡಿಸಿ,ಚನ್ನಾಗಿ ಬೆಂದಿದರೆ ,ಈಗ ಅದಕ್ಕೆ ಕಾಚಂಮ್ ಪುಳಿ, ಬೇಕು ಎನಿಸಿದರೆ ಉಪ್ಪು ಹಾಕಿ, ಕಾಳು ಮೆಣಸಿನ ಪುಡಿ,ಕೊನೆಗೆ, ಕರಿಬೇವಿನ ಸೊಪ್ಪು ಕೊತ್ತಂಬರಿ ಸೊಪ್ಪು ಹಾಕಿ.

ಅಕ್ಕಿ ತರಿರ ಕಡ್ಂಬಿಟ್ಟು :

ಬೇಕಾಗುವ ಸಾಮಗ್ರಿಗಳು : 1 ಕೆಜಿ ಸಣ್ಣ ತರಿ ಅಥವಾ ದೊಡ್ಡ ತರಿ, ಉಪ್ಪು, ನೀರು, ಸೇಕಲ, ಒಂದು ಕಪ್ಪ್ ತರಿಗೆ ಎರಡು ಕಪ್ಪ್ ನೀರು ಬೇಕು.

ಮಾಡುವ ವಿಧಾನ : ಮೊದಲು ಒಂದು ಪಾತ್ರೆಯಲ್ಲಿ ಲೆಕ್ಕದ ಅಳತೆಯಲ್ಲಿ ನೀರು ಹಾಕಿ ,ಉಪ್ಪು ಸೇರಿಸಿ,ಕುದಿಯಲು ಬಿಡಿ,ನೀರು ಕುದಿಯುವಾಗ,ತರಿ ಸೇರಿಸಿ ಕೈ ಆಡಿಸಿ, ಗಂಟು ಬರದ ಹಾಗೆ ನೋಡಿಕೊಳ್ಳಿ,ನೀರು ಇಂಗಿದ ನಂತರ, ಒಂದು ತಟ್ಟೆ ಮುಚ್ಚಿ,ಬೆಂಕಿಯನ್ನು ಕಮ್ಮಿ ಮಾಡಿ, 15 ರಿಂದ 20 ನಿಮಿಷಗಳ ಕಾಲ ಬೇಯಲು ಬಿಡಿ, ಒಂದು ತಟ್ಟೆಗೆ ಹಿಟ್ಟನ್ನು ಸ್ವಲ್ಪ ಹಾಕಿ,ಅದನ್ನು ಚೆನ್ನಾಗಿ ಕಲಿಸಿ,ಸಣ್ಣ ಸಣ್ಣ ಉಂಡೆ ಮಾಡಿ ಕೊಳ್ಳಿ, ಕೈ ಆರದಂತೆ ನೀರು ಇಟ್ಟುಕೊಳ್ಳಿ,ಆಗಾಗ ಕೈಗೆ ನೀರು ಮುಟ್ಟಿಕೊಳ್ಳಿ, ಸೇಕಲ ತೆಗೆದುಕೊಂಡು ,ಅದಕ್ಕೆ ನೀರು ಹಾಕಿ, ಅದರ ತಟ್ಟೆಯ ಮೇಲೆ ಒಂದು ಬಿಳಿ ಬಣ್ಣದ ಬಟ್ಟೆಗಳನ್ನು ನೀರಿನಲ್ಲಿ ನೆನೆಸಿ ತಟ್ಟೆಯ ಮೇಲೆ ಹಾಕಿ,ಅದರ ಮೇಲೆ ಉಂಡೆ ಆಕಾರದಲ್ಲಿ ಇರುವ ಕಡಂಬಿಟ್ಟುನ್ನು ಹಾಕಿ ,ಮುಚ್ಚಳ ಮುಚ್ವಿ 20 ನಿಮಿಷಗಳ ಕಾಲ ಬೇಯಿಸಿ.

ರುಚಿ ರುಚಿಯಾದ, ಪೋರ್ಕ್ ಕರಿ ಮತ್ತು ಕಡಂಬಿಟ್ಟು ಸವಿಯಲು ಸಿದ್ದ.

Kollimada Raki
ಕೊಳ್ಳಿಮಾಡ ರಾಕಿ

error: Content is protected !!