Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
3:03 AM Friday 22-October 2021

ತಮಿಳು ಸಮುದಾಯದವರ ಜಿಲ್ಲಾ ಮಟ್ಟದ ಕ್ರೀಡಾ ಕೂಟ : ಶ್ರಮಿಕ ವರ್ಗಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಸಂಕೇತ್ ಪೂವಯ್ಯ ಒತ್ತಾಯ.

01/02/2021

ಮಡಿಕೇರಿ ಫೆ. 1 : ಪೊಂಗಲ್ ಹಬ್ಬದ ಪ್ರಯುಕ್ತ ಕೊಡಗು ಜಿಲ್ಲಾ ತಮಿಳು ಯುವ ಒಕ್ಕೂಟದ ವತಿಯಿಂದ ಸಮುದಾಯ ಬಾಂಧವರಿಗೆ ಜಿಲ್ಲಾ ಮಟ್ಟದ ಕಾವೇರಿ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳು ಚೆಟ್ಟಳ್ಳಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಸಂಕೇತ್ ಪೂವಯ್ಯ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ತಮಿಳು ಸಮುದಾಯದವರು ಶ್ರಮಿಕ ಜೀವಿಗಳಾಗಿದ್ದು, ಕಾಫಿ ಕೊಯ್ಲಿನ ಸಂದರ್ಭ ಕೆಲಸ ಮಾಡುವ ಮೂಲಕ ಕೊಡಗಿನ ಕಾಫಿ ಕ್ಷೇತ್ರಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ.
ಆದರೆ ಸರಕಾರಗಳು ಶ್ರಮಿಕ ಜೀವಿಗಳ ಸಮಸ್ಯೆಯನ್ನು ಆಳಿಸುವಲ್ಲಿ ವಿಫಲವಾಗಿದೆ. ಮುಂದಾದರು ಶ್ರಮಿಕ ಜೀವಿಗಳಿಗೆ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ತಮಿಳು ಸಮುದಾಯದವರನ್ನು ಒಂದು ಗೂಡಿಸಲು ಇಂತಹ ಕ್ರೀಡಾ ಕೂಟಗಳು ನಡೆಯಬೇಕು ಆ ಮೂಲಕ ಸಮುದಾಯ ಬಾಂಧವರ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯ ವಿಜು ಸುಬ್ರಮಣಿ ಮಾತನಾಡಿ ಸಮಾಜದ ಹಿತ ದೃಷ್ಟಯಿಂದ ಕ್ರೀಡಾಕೂಟಗಳು ಆರೋಗ್ಯಕರ ಬೆಳವಣಿಗೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡಾಕೂಟಗಳನ್ನು ಆಯೋಜಿಸಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಾಧಕ ವಿದ್ಯಾರ್ಥಿಗಳಾದ ಶೈನಿ, ಸಂಧ್ಯಾ,ಸಂಯುಕ್ತ, ಸರಿತಾ, ಪ್ರೀತಿ, ಅನುತ, ವಿನೀತ, ವರುಣ್, ಚಂದ್ರಕಾಲ, ನಾಚಪ್ಪ, ಹರ್ಷ, ಸಂಗೀತಾ, ವಿನೀತ ನವೀನ್, ಲಾವಣ್ಯ, ಶಶಿಕಲಾ, ಹರ್ಷವರ್ಧನ್ ಸೇರಿದಂತೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿಜಯ ಸಾಧಿಸಿ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ನಂದಕುಮಾರ್, ಕನಕರಾಜ್, ಪಳನಿಸ್ವಾಮಿ, ಮಂಜುಳಾ, ಪ್ರಭಾ, ಶಂಕರ, ಭಾಸ್ಕರ್ ನಾಯಕ್, ದೀಪಾ, ಮಂಜುನಾಥ್, ರಾಸಾತಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರವಿ, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಉಪಾಧ್ಯಕ್ಷರಾದ ಸುಧಾಕರ್, ಕದಿರೇಶ್, ವಿಜಯಲಕ್ಷ್ಮಿ, ಸಂಚಾಲಕ ಸುರೇಶ್ ಬಿಳಿಗೇರಿ, ಸಹ ಸಂಚಾಲಕರಾದ ಪನ್ನೀರ್ ಸೆಲ್ವಂ, ಖಜಾಂಚಿ ಸುರೇಶ್, ಸಂಘಟನಾ ಕಾರ್ಯದರ್ಶಿ ವಿಘ್ನೇಶ್, ಸಹಕಾರ್ಯದರ್ಶಿ ಮಣಿಕಂಠ, ಅರುಣ್, ನಿರ್ದೇಶಕರಾದ ಮಹೇಶ್ ಕುಮಾರ್, ದಯಾನಂದ ಸುಕುಮಾರ್, ವೆಲಾಯುದನ್,ಈಶ್ವರ್, ಶಾಂತಿ,ರೋಜಾ, ನಂದಿನಿ ಮತ್ತಿರಾರು ಉಪಸ್ಥಿತರಿದ್ದರು.