ಮಂಜಿಕೆರೆ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಕೊರಗಜ್ಜನ ನೇಮೋತ್ಸವ

01/02/2021

ಸುಂಟಿಕೊಪ್ಪ,ಫೆ.1: ಮಂಜಿಕೆರೆ ಗ್ರಾಮದಲ್ಲಿ ಕೊರಗಜ್ಜನ 2 ನೇ ವರ್ಷದ ನೇಮೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ನಾಕೂರು ಶಿರಂಗಾಲ ಗ್ರಾಮದ ಮಂಜಿಕೆರೆ ಗ್ರಾಮದಲ್ಲಿ 2ನೇ ವರ್ಷದ ಕೊರಗಜ್ಜನ ನೇಮೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕಾರ್ಯದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಸ್ಥಳ ಶುಧ್ದಿ ಮತ್ತು ಗಣಪತಿ ಹೋಮ ಬೆತ್ತದ ದಂಡು ಸಮರ್ಪಣೆ ಪೂಜೆಯನ್ನು ಕದಕಲ್ ಕೃಷ್ಣ ಭಟ್ ನೆರವೇರಿಸಿದರು. ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಶನಿವಾರ ರಾತ್ರಿ ನಡೆದ ಕೊರಗಜ್ಜನ ಕೋಲವು ಬೆಳಿಗ್ಗೆ 3 ಗಂಟೆಯವರೆಗೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಕೊಡಗರಹಳ್ಳಿ, ಸುಂಟಿಕೊಪ್ಪ, ಗದ್ದೆಹಳ್ಳ, ಏಳನೇ ಹೊಸಕೋಟೆ, ಮಾರುತಿ ನಗರ ನಾಕೂರು ಅಂದಗೋವೆ, ಮಳ್ಳೂರು, ಕಾನ್‍ಬೈಲು ಬೈಚನ ಹಳ್ಳಿ, ಕೊಳಂಬೆ, ಹರದೂರು ಗ್ರಾಮಗಳಿಂದ ಗ್ರಾಮಸ್ಥರು ಪಾಲ್ಗೊಂಡಿದ್ದರು.