ಕುಶಾಲನಗರದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

February 1, 2021

ಕುಶಾಲನಗರ ಫೆ.1 : ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಇಲ್ಲಿನ ಅನುಗ್ರಹ ಪದವಿ ಕಾಲೇಜಿನಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.
ಕಾಲೇಜು ಪ್ರಾಂಶುಪಾಲ ಪಂಡರೀನಾಥ ನಾಯ್ಡು ಹಾಗು ಈ ಸಂದರ್ಭ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಹುಟ್ಟಿನಿಂದ ಮಡಿವಾಳನಾಗಿದ್ದ ಮಾಚಿದೇವ ಸತ್ಯ ಶುದ್ದ ಕಾಯಕವೇ ತನ್ನ ಜೀವನದ ಉಸಿರು ಎಂದುಕೊಂಡಿದ್ದ. ಅರಸುತನ ಮೇಲಲ್ಲ – ಅಗಸತನ ಕೀಳಲ್ಲ ಎಂಬುದನ್ನು ಸಾರಿದ ಈ ಮಾಚಿದೇವ, ಅನುಭವ ಮಂಟಪಕ್ಕೆ ಬರುವ ಶರಣರನ್ನು ಪರೀಕ್ಷಿಸಿ, ಅವರನ್ನು ಮಡಿ ಹಾಸಿ ಸ್ವಾಗತಿಸುವ ನಿಷ್ಠೆಯ ಕಾಯಕ ಇವರದಾಗಿತ್ತು ಎಂದರು.
ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣಧರ್ಮದ ಸಂರಕ್ಷಣೆಯ ಮಹತ್ತರವಾದ ಜವಾಬ್ದಾರಿ ವಹಿಸಿದ್ದ ಮಾಚಿದೇವರು, ಪ್ರಾಣಿಗಳನ್ನು ಕೊಲ್ಲದಿರುವುದೇ ಧರ್ಮ ಎಂದು ಸಾರಿದರಲ್ಲದೇ ಸಕಲ ಜೀವರಾಶಿಗಳಲ್ಲಿ ದಯೆ ಇರಬೇಕೆಂಬುದನ್ನು ಒತ್ತಿ ಹೇಳಿದ ಮಹಾಶರಣ ಎಂದರು.
ಕಾಲೇಜಿನ ಉಪಪ್ರಾಂಶುಪಾಲೆ ಚೈತ್ರಾ, ಸಾಹಿತಿ ಹಾಗು ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ, ಉಪನ್ಯಾಸಕರಾದ ಹರ್ಷಿತಾ, ಮೇಘನಾ, ಸೌಮ್ಯ ಹಾಗು ನೌಷದ್ ಮೊದಲಾದವರಿದ್ದರು.

error: Content is protected !!