ಜಾನಪದ ಗೀತ ಗಾಯನ ಸ್ಪರ್ಧೆ ಬಹುಮಾನ ವಿತರಣೆ : ಜಾನಪದದ ಹಾದಿಯಲ್ಲಿ ಸಾಗುವ ಬದುಕು ಅರ್ಥಪೂರ್ಣ : ಉ.ರ. ನಾಗೇಶ್ ಅಭಿಮತ

February 1, 2021

ಮಡಿಕೇರಿ ಫೆ. 1 : ಹಿಂದೊಮ್ಮೆ ಜಾನಪದದ ಹಾದಿಯಲ್ಲಿ ಸಾಗಿ ಬಂದ ಮಾವನದ ಬದುಕು ಪ್ರಸ್ತುತ ಆಧುನಿಕತೆಗೆ ಅಂಟಿಕೊಂಡಿದೆ. ಜಾನಪದ ಸಂಸ್ಕøತಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮಾನವನÀ ಬದುಕು ಜಾನಪದದ ಹಾದಿಯಲ್ಲಿ ಸಾಗಿಸಿದರೆ ಮಾತ್ರ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಉ.ರ. ನಾಗೇಶ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಕಳೆದ ಡಿಸೆಂಬರ್‍ನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಜಾನಪದ ಗೀತಗಾಯನ ಸ್ಪರ್ಧೆಯ ಪ್ರಯುಕ್ತ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ನಾಗೇಶ್ ಮಾತನಾಡಿದರು. ಜಾನಪದಕ್ಕೆ ಸಂಬಂಧಗಳನ್ನು ಬೆಸೆಯುವ ಶಕ್ತಿ ಇದೆ. ಬದುಕಿನ ನೈಜತೆಯನ್ನು ತಿಳಿಸುವ ಸಾಮಥ್ರ್ಯವಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಜಾನಪದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವದರಿಂದ ಮಾನವದ ಬದುಕು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಜಾನಪದದ ವಿಮರ್ಷೆಯಾಗಬೇಕು ಎಂದು ಅಭಿಪ್ರಾಯಿಸಿದ ಅವರು ಮನುಷ್ಯ ಏಕಾಂತದಿಂದ ಲೋಕಾಂತದತ್ತ ಸಾಗಬೇಕಾದರೆ ಜಾನಪದದ ಬೆಲೆಯನ್ನು ಅರಿಯಬೇಕಿದೆ. ಬದುಕನ್ನು ಗಟ್ಟಿಗೊಳಿಸುವ ಶಕ್ತಿ ಇರುವದು ಜಾನಪದಕ್ಕೆ ಮಾತ್ರ ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ, ಜಾನಪದ ಕಲೆಗಳು, ಪರಿಕರಗಳ ಬಗ್ಗೆ ತಿಳಿದು ಅವುಗಳ ದಾಸರಾದರೆ ಮಾತ್ರ ಜಾನಪದದ ಬೆಳವಣಿಗೆ ಸಾಧ್ಯವಾಗುತ್ತದೆ. ನಿತ್ಯ ಕಲಿಕೆಯೊಂದಿಗೆ ಜಾನಪದದ ಸಹಜ ಸತ್ವವನ್ನು ಅರಿತುಕೊಳ್ಳುವ ಮೂಲಕ ಜಾನಪದ ಕಲೆ ಸಂಸ್ಕøತಿ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರು ಹಾಗೂ ಕಲಾ ತಂಡದಿಂದ ಜಾನಪದ ಗೀತ ಗಾಯನ ನಡೆಯಿತು. ಸ್ಪರ್ಧಾ ವಿಜೇತರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು. ಗೀತ ಗಾಯನ ಸ್ಪರ್ಧೆಯಲ್ಲಿ ಸುಮಾರು 140 ಸ್ಪರ್ಧಿಗಳು ಭಾಗಿಗಳಾಗಿದ್ದುದು ವಿಶೇಷ. ಗಡಿಭಾಗ ಕುಟ್ಟ, ಕರಿಕೆ. ಶನಿವಾರಸಂತೆಯಿಂದಲೂ ಕಲಾವಿದರು ಆಗಮಿಸಿ ಮನತಟ್ಟುವ ಜಾನಪದ ಗೀತೆಗಳನ್ನು ಹಾಡಿದರು.
ಜಾನಪದ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಪ್ರಾಸ್ತಾವಿಕ ನುಡಿಯಾಡಿದರು. ಜಾನಪದ ಪರಿಷತ್‍ನ ಜಿಲ್ಲಾ ಖಜಾಂಚಿ ಸಂಪತ್‍ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಾನಪದ ಪರಿಷತ್ ಸದಸ್ಯೆ ಕೃಪಾದೇವರಾಜ್ ನಿರೂಪಿಸಿ, ಗೀತಾ ಸಂಪತ್‍ಕುಮಾರ್ ಹಾಗೂ ಜಯಶ್ರೀ ಅನಂತಶಯನ ಪ್ರಾರ್ಥಿಸಿದರು. ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ, ಉಪಾಧ್ಯಕ್ಷೆ ರಾಣಿ ಮಾಚಯ್ಯ ವಂದಿಸಿದರು.

error: Content is protected !!