ಮೋದಿ ಸರ್ಕಾರದಿಂದ ‘ಆತ್ಮ ಬರ್ಬರ’ ಬಜೆಟ್ ಮಂಡನೆ: ಸಿದ್ದರಾಮಯ್ಯ

February 1, 2021

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್‌ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಇದು ಆತ್ಮನಿರ್ಭರ ಬಜೆಟ್‌ ಅಲ್ಲ, ಆತ್ಮ ಬರ್ಬರ ಬಜೆಟ್ ಎಂದು ಬಣ್ಣಿಸಿದ್ದಾರೆ.

ಆತ್ಮ ಬರ್ಬರ ಎಂದರೆ, ದಿವಾಳಿತನ ಎಂದರ್ಥ. ಕೇಂದ್ರ ಸರ್ಕಾರ ದಿವಾಳಿ ಬಜೆಟ್ ಮಂಡಿಸಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ಸಾಲ ನೀಡುವ ಬದಲು ಕೃಷಿ ಸೆಸ್ ಹಾಕಿದ್ದಾರೆ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಇದರಿಂದ ಹಣದುಬ್ಬರ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದು ಎಂಥಾ ವ್ಯವಸ್ಥೆ ಎಂದು ಸಮಾಧಾನ ಹೊರಹಾಕಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ, ರೈತರಿಗಾಗಿ ಹೊಸ ಯೋಜನೆ ಘೋಷಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್ ವೇಳೆ ಕೈಗಾರಿಕೆಗಳು ಮುಚ್ಚಿ ಹೋಗಿದ್ದವು. ಆ ಕೈಗಾರಿಕೆಗಳ ಬಲವರ್ಧನೆ ಮಾಡುವ ಬದಲು ಯಂತ್ರೋಪಕರಣಗಳ ಮೇಲೂ ಸೆಸ್ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

error: Content is protected !!