ಭಾಗಮಂಡಲ ವಿವಿಧೆಡೆ ಫೆ.2 ಮತ್ತು 3 ರಂದು ವಿದ್ಯುತ್ ವ್ಯತ್ಯಯ

February 1, 2021

ಮಡಿಕೇರಿ ಫೆ. 1 : ಮಡಿಕೇರಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಎಫ್-6 ಭಾಗಮಂಡಲ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿದ್ದು, ಫೆಬ್ರವರಿ, 2 ಮತ್ತು 3 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬೆಟ್ಟಗೇರಿ, ಬೇಂಗೂರು, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ ಟೌನ್, ತಲಕಾವೇರಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ಉಪ ವಿಭಾಗದ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.

error: Content is protected !!