ವಿದ್ಯುತ್ ಸಂಪರ್ಕದ ಮಾರ್ಗ ಸ್ಥಳಾಂತರ : ಮಾಹಿತಿ ನೀಡಲು ಮನವಿ

01/02/2021

ಮಡಿಕೇರಿ ಫೆ. 1 : ಮಡಿಕೇರಿ ವಿದ್ಯುತ್ ವಿತರಣಾ ಕೇಂದ್ರದಿಂದ ಮಕ್ಕಂದೂರು ಅರಣ್ಯದ ಮುಖಾಂತರ ಹಾದು ಹೋಗುವ ಮುಕ್ಕೋಡ್ಲು ಆವಂದಿ, ಹಮ್ಮಿಯಾಲ ಮುಟ್ಲು ಗ್ರಾಮಗಳ ವಿದ್ಯುತ್ ಸಂಪರ್ಕದ ಮಾರ್ಗವನ್ನು ತಂತಿಪಾಲ ಮೇಘತ್ತಾಳು ರಸ್ತೆ ಬದಿಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡಿರುವ ವಿದ್ಯುತ್ ಮಾರ್ಗ ಚಾಲನೆಗೊಂಡಿರುತ್ತದೆ. ಆದ್ದರಿಂದ ಮುಕ್ಕೋಡ್ಲು, ಆವಂದಿ, ಹಮ್ಮಿಯಾಲ, ಮುಟ್ಲು, ತಂತಿಪಾಲ, ಮೇಘತ್ತಾಳು, ಹೊದಕಾನ ಗ್ರಾಮಗಳ ತೋಟದಲ್ಲಿ ಕೆಲಸ ನಿರ್ವಹಿಸುವ ವೇಳೆ ಕೆಲಸಗಾರರು ಜಾಗರೂಕತೆಯಿಂದ ಕೆಲಸ ನಿರ್ವಹಿಸಲು ಮಾಲೀಕರು ಕ್ರಮ ವಹಿಸುವುದು ಹಾಗೂ ವಿದ್ಯುತ್ ಮಾರ್ಗದಲ್ಲಿ ಯಾವುದೇ ತೊಂದರೆಗಳು ಕಂಡುಬಂದಲ್ಲಿ ಸಹಾಯವಾಣಿ 1912 ಗೆ ಮಾಹಿತಿ ನೀಡುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.