ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್ ಗೆ ಫೆ5 ರಂದು ಚಾಲನೆ

01/02/2021

ಸಿದ್ದಾಪುರ ಫೆ.1 : ಸರ್ವಧರ್ಮದ ಭಾವೈಕ್ಯತೆಯ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್ ಫೆ5ರಿಂದ 8ರವರೆಗೆ. ಕೋವಿಡ್  ನಿಯಮ ಪಾಲನೆ ಮೂಲಕ  ಸರಳ ಆಚರಣೆಗೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದುಪಾಲಿಬೆಟ್ಟ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಎಂ. ಸೈನುದ್ದೀನ್  ಪತ್ರಿಕೆಗೆ ತಿಳಿಸಿದ್ದಾರೆ.ಫೆ.5ರಂದು ಮದ್ಯಾಹ್ನ 2 ಗಂಟೆಗೆ ಸಯ್ಯದಲಿ ಶಿಹಾಬುದ್ದೀನ್ ಅಲ್ ಹೈದ್ರೋಸಿ ಅಹ್ಸನಿ ಕಲ್ಲರಕ್ಕಲ್ ಅವರು ದ್ವಜಾರೋಹಣ ನೆರವೇರಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಸಂಜೆ 7.30 ಗಂಟೆಗೆ ಪಾಲಿಬೆಟ್ಟ ಖತೀಬ್ ಅಲಿ ಸಖಾಫಿ, ಫೆ.6 ಸಂಜೆ 7.30ಗಂಟೆಗೆ ಜಸೀಲ್ ಅಹಸನಿ ಪಾಕಣ, ಫೆ.7 ಸಂಜೆ 7.30ಗಂಟೆಗೆ ಹುಂಡಿ ಸುನ್ನಿ ಜುಮಾ ಮಸೀದಿ ಖತೀಬ್ ನೌಶಾದ್ ಸುಹರಿ ಅವರಿಂದ ಧಾರ್ಮಿಕ ಉಪನ್ಯಾಸ ಜರುಗಲಿದೆ. ಫೆ.8ರಂದು ಸಂಜೆ 4ಗಂಟೆಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಅಂದು ಸಂಜೆ 7ಗಂಟೆಗೆ ಸಯ್ಯದ್ ಸ್ವಾಲಿಹ್ ತುರಾಬ್ ಅಸ್ಸಖಾಫಿ ಕಲ್ಲಾಯಿ ತಂಙಳ್ ಅವರ ನೇತೃತ್ವದಲ್ಲಿ ದಿಕ್ರ್ ಹಲ್ಕ  ಏರ್ಪಡಿಸಲಾಗಿದೆ ಎಂದರು. ಕಾರ್ಯದರ್ಶಿ ಹನೀಫ ಮಾತನಾಡಿ, ಪ್ರತಿ ವರ್ಷವೂ ವಿಜೃಂಭಣೆಯಿಂದ ಆಚರಿಸುತ್ತಿರುವ ಉರೂಸ್ ಈ ವರ್ಷ ಕೋವಿಡ್19ರ ನಿಯಮಾನುಸಾರ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ದರ್ಗಾ ಸಮೀಪ ಯಾವುದೇ ವ್ಯಾಪಾರ ವಹಿವಾಟಿಗೆ ಅನುಮತಿ ನೀಡುತ್ತಿಲ್ಲ ಉರುಸ್ ಗೆ ಆಗಮಿಸುವ ಭಕ್ತಾದಿಗಳು ಕೋವಿಡ್  ನಿಯಮ ಪಾಲನೆಯೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮ ಪಾಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಪಾಲಿಬೆಟ್ಟ ಜಮಾಅತ್ ಕಾರ್ಯದರ್ಶಿ ಎಲ್ ಖಾಲಿದ್, ಖಜಾಂಚಿ ಟಿ.ಕೆ. ಮುಸ್ತಫ ಸೇರಿದಂತೆ ಮತ್ತಿತರರು ಇದ್ದರು.