ಜೀಪ್, ಬೈಕ್ ಮುಖಾಮುಖಿ ಡಿಕ್ಕಿ : ಕಕ್ಕಬ್ಬೆ ಬಳಿ ಯುವಕ ಸಾವು

01/02/2021

ಮಡಿಕೇರಿ ಫೆ.1 : ಜೀಪ್, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕಕ್ಕಬ್ಬೆ ಬಳಿ ನಡೆದಿದೆ.
ಪರದಂಡ ಸ್ವೀಟ ಪೆಮ್ಮಯ್ಯ ಹಾಗೂ ಪ್ರಮೀಳಾ ದಂಪತಿ ಪುತ್ರ, ಬೈಕ್ ಸವಾರ ಪರದಂಡ ದಿಲ್ (24) ಮೃತ ದುದೈರ್ವಿ. ಅಪಘಾತ ನಡೆದ ಸ್ಥಳದಿಂದ ನಾಪೋಕ್ಲು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ದಿಲ್ ಪರದಂಡ ಕುಟುಂಬದ ಅತ್ಯುತ್ತಮ ಹಾಕಿ ಆಟಗಾರನಾಗಿ ಗಮನ ಸೆಳೆದಿದ್ದರು.