ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಖಾಸಗಿ ವಿವಿ ಮಸೂದೆ ಅಂಗೀಕಾರ

02/02/2021

ಬೆಂಗಳೂರು: ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರ ವಿರೋಧದ ನಡುವೆಯೂ ಜಗದ್ಗುರು ಮುರುಘ ರಾಜೇಂದ್ರ ವಿಶ್ವವಿದ್ಯಾನಿಲಯ ವಿಧೇಯಕ ಅಂಗೀಕಾರಗೊಂಡಿದೆ. ಜೊತೆಗೆ ವಿದ್ಯಾಶಿಲ್ಪ ವಿವಿ ವಿಧೇಯಕ, ಏಟ್ರಿಯಾ ವಿವಿ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದೆ.

ಖಾಸಗಿ ವಿವಿ ಸ್ಥಾಪನೆ ವಿಧೇಯಕಕ್ಕೆ ಆಡಳಿತ ಪಕ್ಷದವರೇ ಆದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಖಾಸಗಿ ವಿವಿಗಳಿಗೆ ಕೆಲವೊಂದು ಅಧಿಕಾರ ಮೊಟಕುಗೊಳಿಸಲು ಆಗ್ರಹಿಸಲಾಗಿತ್ತು.

ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ಎಚ್‌ಕೆ ಪಾಟೀಲ್ ಹಾಗೂ ಕೃಷ್ಣಬೈರೇಗೌಡ ಅವರಿಂದಲೂ ವಿರೋಧ ವ್ಯಕ್ತವಾಗಿತ್ತು. ಎಚ್‌ಕೆ ಪಾಟೀಲ್‌ ಅವರು ವಿಧೇಯಕಕ್ಕೆ ಕೆಲವೊಂದು ತಿದ್ದುಪಡಿಗೆ ಸೂಚನೆ ನೀಡಿದ್ದರು. ಹೀಗಿದ್ದರೂ ಖಾಸಗಿ ವಿವಿ ವಿಧೇಯಕಗಳಿಗೆ ಅಂಗೀಕಾರ ಪಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ.