ರುಚಿ ನೋಡಿ : ರುಚಿ ರುಚಿಯಾದ ಬೆಣ್ಣೆ ಕಡ್ಂಬುಟ್ಟು

February 2, 2021

ಬೆಣ್ಣೆ ಕಡ್ಂಬುಟ್ಟು

ಬೇಕಾಗುವ ಸಾಮಗ್ರಿಗಳು : 1 ಕೆಜಿ ಸಾದ ಅಕ್ಕಿ, 1 ಕಪ್ ತೆಂಗಿನ ತುರಿ, ಉಪ್ಪು, 1 ಚಮಚ ತುಪ್ಪ, ನೀರು, 3 ಏಲ್ಲಕ್ಕಿ.

ಮಾಡುವ ವಿಧಾನ : ಮೊದಲು ಅಕ್ಕಿಯನ್ನು ನೀರಿನಲ್ಲಿ 4 ತಾಸು ನೆನೆಸಿ, ನಂತರ ಅದನ್ನು ತೊಳೆದು, ಮಿಕ್ಸ್ ಗೆ ಅಕ್ಕಿ,ತೆಂಗಿನ ಕಾಯಿ,ಉಪ್ಪು, ಏಲಕ್ಕಿ, ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ, (1 ಕಪ್ ಅಕ್ಕಿಗೆ 2 ಕಪ್ ನೀರು) ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ಒಲೆಯ ಮೇಲೆ ಇಟ್ಟು ,ಒಲೆ ಹತ್ತಿಸಿ, ಚೆನ್ನಾಗಿ ಕೈಯಾಡಿಸಿ, ಗಂಟ್ಟು ಬರದ ಹಾಗೆ ನೋಡಿಕೊಳ್ಳಿ,
15ರಿಂದ 20 ನಿಮಿಷಗಳ ಕಾಲ, ಈಗ ಅದನ್ನು ಕೆಳಗೆ ಇಳಿಸಿ, ತಟ್ಟೆಗೆ ಹಾಕಿ, ನಾದಿ, ಗೋಲಿ ಆಕಾರ ಗಾತ್ರಕ್ಕೆ ಉಂಡೆ ಕಟ್ಟಿ ಕೊಳ್ಳಿ, ಇದನ್ನು ಸೇಕಲದಲ್ಲಿ ಹಾಕಿ 35 ನಿಮಿಷಗಳ ಕಾಲ ಬೇಯಿಸಿ, ಇದು ಕೋಳಿ ಸಾರು, ಇಲ್ಲವೇ, ಪುದೀನ, ಅಥವಾ ಕೊತ್ತಂಬರಿ ಸೊಪ್ಪು ಚಟ್ನಿ ಜೊತೆಗೆ ಸೇವಿಸಿ.

: ಕೊಳ್ಳಿಮಾಡ ರಾಕಿ

error: Content is protected !!