ಕೋಪಟ್ಟಿಯ ಶ್ರೀಮಹಾವಿಷ್ಣು ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವಕ್ಕೆ ಫೆ.12 ರಂದು ಚಾಲನೆ

February 2, 2021

ಮಡಿಕೇರಿ ಫೆ.2 : ಕೋಪಟ್ಟಿಯ ಶ್ರೀಮಹಾವಿಷ್ಣು ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಫೆ.12 ರಿಂದ 17ರ ವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಜರುಗಲಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಆರು ದಿನಗಳ ಕಾಲ ಪೂಜಾ ವಿಧಿ ವಿಧಾನಗಳು ನಡೆಯಲಿವೆ.
ಫೆ.12 ರಂದು ಸಂಜೆ 5 ಗಂಟೆಗೆ ತಂತ್ರಿಗಳ ಆಗಮನವಾಗಲಿದ್ದು, ಪ್ರಾಸಾದ ಸರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತುರಕೋಘ್ನ ಹೋಮ,ವಾಸ್ತು ಬಲಿ ಅಂಕುರಾರ್ಪಣೆ ನಡೆಯಲಿದೆ. ಫೆ. 13 ರಂದು ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಅಂಕುರ ಪೂಜೆ, ಬಿಂಬ ಶುದಿ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ ನಡೆಯಲಿದ್ದು, ಸಂಜೆ 5 ರಿಂದ ದುರ್ಗಾನಮಸ್ಕಾರ ಪೂಜೆ, ಅಂಕುರ ಪೂಜೆ, ಭಗವತಿ ಕ್ಷೇತ್ರದಲ್ಲಿ ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದೆ.
ಫೆ.14 ರಂದು ಬೆಳಗ್ಗೆ 7 ರಿಂದ ಅಂಕುರ ಪೂಜೆ, ಶಾಂತಿ ಹೋಮಗಳು, ಹೋಮ ಕಲಶಾಭಿಷೇಕ, ಭಗವತಿ ಸಾನಿಧ್ಯದಲ್ಲಿ ಅನುಜ್ಞಾ ಕಲಶ ಪೂಜೆ ಜೀವ ಕಲಶ ಪೂಜೆ, ಶಯನ ಹಾಗೂ ರಾತ್ರಿ ಧ್ಯಾನಾಧಿವಾಸ ನಡೆಯಲಿದೆ.
ಫೆ.15ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, 9-12ರ ಮೀನ ಲಗ್ನದಲ್ಲಿ ಶ್ರೀ ಭಗವತಿ ಸಾನಿಧ್ಯ ಪುನರ್ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ ಹಾಗೂ ವಿಷ್ಣು ಸಾನಿಧ್ಯದಲ್ಲಿ ತತ್ವಹೋಮ, ತತ್ವಕಲಶಾಭಿಷೇಕ ನಡೆಯಲಿದ್ದು, ರಾತ್ರಿ ಮಂಟಪ ಸಂಸ್ಕಾರ ಹಾಗೂ ಅಕುಂರ ಪೂಜೆ ಜರುಗಲಿದೆ.
ಫೆ.16 ರಂದು ಬೆಳಿಗ್ಗೆ ಗಣಪತಿ ಹೋಮ, ಸಂಹಾರ ತತ್ವ ಕಲಶ ಪೂಜೆ, ಸಂಹಾರ ತತ್ವ ಕಲಶ ಹೋಮ, ತತ್ತ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಜೀವ ಕಲಶ ಪೂಜೆ, ಜೀವ ಕೆಲಶ, ಶಯ್ಯಾಗಮನ, ಶಯನ ನಡೆಯಲಿದ್ದು, ಸಂಜೆ 6 ರಿಂದ ಧ್ಯಾನಾಧಿವಾಸ, ಬ್ರಹ್ಮ ಕಲಶ ಪೂಜೆ, ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ ನಡೆಯಲಿದೆ.
ಫೆ.17 ರಂದು ಬೆಳಿಗ್ಗೆ ಗಣಪತಿ ಹೋಮ, 9.5ರ ಅಶ್ವಿನಿ ನಕ್ಷತ್ರದಲ್ಲಿ ಶ್ರೀ ಮಹಾವಿಷ್ಣು ದೇವರ ಪುನರ್ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12-30ಕ್ಕೆ ಮಹಾಪೂಜೆಯ ನಂತರ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯಾಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿ ಮನವಿ ಮಾಡಿದೆ.

error: Content is protected !!