ನೆಲ್ಲಿಹುದಿಕೇರಿಯಲ್ಲಿ ಫೆ. 20 ರಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ

02/02/2021

ಮಡಿಕೇರಿ ಫೆ.2 : ಸಿದ್ದಾಪುರದ ಫೈ ಸ್ಟಾರ್ ಯುವಕ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆಶಿಕ್ ತಿಳಿಸಿದ್ದಾರೆ.
ನೆಲ್ಲಿಹುದಿಕೇರಿಯ ಕಾವೇರಿ ಸೇತುವೆ ಬಳಿಯ ಮೈದಾನದಲ್ಲಿ ಫೆ. 20 ರಂದು ಸೂಪರ್ 8 ಪಂದ್ಯಾವಳಿ ಏರ್ಪಡಿಸಲಾಗಿದ್ದು, ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. 20 ಸಾವಿರ ಹಾಗೂ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 10 ಸಾವಿರ ಹಾಗೂ ಟ್ರೋಫಿ ಮತ್ತು ಸೆಮಿ ಫೈನಲ್‌ನಲ್ಲಿ ಸೋಲನುಭವಿಸುವ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ತಂಡಗಳ ಹೆಸರನ್ನು ನೊಂದಾಯಿಸಲು ಫೆ. 10 ಕೊನೆಯ ದಿನಾಂಕವಾಗಿದೆ. ಸಂಪರ್ಕಿಸಬೇಕಾದ ಸಂಖ್ಯೆ: 9632050761 ಮತ್ತು 8277314223.