ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಕೊಡಗು ಕನ್ನಡ ಜಾಗೃತಿ ಸಮಿತಿ ಒತ್ತಾಯ

February 2, 2021

ಸೋಮವಾರಪೇಟೆ ಫೆ. 2 : ಕನ್ನಡ ಕಾಯಕ ವರ್ಷಾಚರಣೆ ಅಂಗವಾಗಿ ಶುದ್ಧ ಕನ್ನಡ ನಾಮಫಲಕ ಹಾಗೂ ಆಡಳಿತದಲ್ಲಿ ಕನ್ನಡ ಅನುಷ್ಠಾನ ಆಂದೋಲನದ ಹಕ್ಕೊತ್ತಾಯ ಪತ್ರವನ್ನು ತಾ.ಪಂ ಗೆ ನೀಡಲಾಯಿತು.
ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್ ಹಾಗೂ ಕಾಜೂರು ಸತೀಶ್ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ನವರಿಗೆ ನೀಡಿ ತಾಲೂಕು ಪಂಚಾಯಿತಿ ಖಚೇರಿ ಹಾಗೂ ಗ್ರಾಮ ಪಂಚಾಯ್ತಿ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಲು ಕ್ರಮಕೈಗೊಳ್ಳ ಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನ ಗೊಳಿಸಲು ಕನ್ನಡ ಅಭಿವೃದ್ಫಿ ಪ್ರಾಧಿಕಾರದ ಮೂಲಕ ಕನ್ನಡ ಕಾಯಕ ವರ್ಷವನ್ನಾಗಿ ಘೋಷಿಸಿದೆ. ಆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಖಚೇರಿಗಳಲ್ಲಿ ಕನ್ನಡ ಸಮರ್ಪಕವಾಗಿ ಜಾರಿಗೆ ಬರಬೇಕು ಹಾಗೂ ವ್ಯಾವಹಾರಿಕ ಸ್ಥಳಗಳಾದ ಅಂಗಡಿಮುಂಗಟ್ಟುಗಳು, ಹೋಟೆಲ್, ಮಾಲ್ ಗಳು, ರಾಜ್ಯಸರ್ಕಾರದ ಖಚೇರಿಗಳ ನಾಮಪಲಕಗಳು ಕಡ್ಡಾಯವಾಗಿ ಕನ್ನಡವೇ ಪ್ರದಾನವಾಗಿರಬೇಕು. ಕೇಂದ್ರ ಸರ್ಕಾರದ ಖಚೇರಿಗಳ ನಾಮಪಲಕಗಳು ತ್ರಿಭಾಷಾ ನೀತಿಯಂತಿರಬೇಕೆಂದು ಸೂಚಿಸಲಾಗಿದ್ದು, ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

error: Content is protected !!